ಸುಳ್ಯ ತಾಲೂಕಿನಲ್ಲಿ ಮಕ್ಕಳ ಕಾಲು ಬಾಯಿ ಜ್ವರದ ಅನೇಕ ಪ್ರಕರಣಗಳು ಕಾಣಿಸಿಕೊಂಡಿವೆ.
ಇದು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ವೈರಲ್ ಸೋಂಕು. ಇದರ ಲಕ್ಷಣಗಳೆಂದರೆ ಜ್ವರ, ಬಾಯಿಯಲ್ಲಿ ಹುಣ್ಣುಗಳು, ಮತ್ತು ಕೈ ಹಾಗೂ ಪಾದಗಳ ಮೇಲೆ ಸಣ್ಣ ಗುಳ್ಳೆಗಳುಳ್ಳ ಕಜ್ಜಿಗಳು.ಕಜ್ಜಿಗಳ ನೋವಿಗೆ ಜ್ವರ ಬರುತ್ತವೆ.ಈ ರೋಗ ಸಾಮಾನ್ಯವಾಗಿ 7 ರಿಂದ 10 ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಗುಣವಾಗುತ್ತದೆ.ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿ ರೋಗದ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 2 ದಿನಗಳ ನಂತರ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಜ್ವರ ಮತ್ತು ಸುಸ್ತು.ಬಾಯಿಯ ಒಳಭಾಗ, ನಾಲಿಗೆ ಮತ್ತು ಗಂಟಲಿನಲ್ಲಿ ನೋವಿನಿಂದ ಕೂಡಿದ ಸಣ್ಣ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ.ಅಂಗೈ ಮತ್ತು ಪಾದಗಳ ಮೇಲೆ ಕೆಂಪು ದೊಡ್ಡ ಗಾತ್ರದ ಕಜ್ಜಿಗಳು ಅಥವಾ ಸಣ್ಣ ಗುಳ್ಳೆಗಳು.ಈ ಕಾರಣದಿಂದ ಬಾಯಿಯಲ್ಲಿ ನೋವು ಇರುವುದರಿಂದ ಮಕ್ಕಳು ಆಹಾರ ಅಥವಾ ನೀರನ್ನು ನುಂಗಲು ಕಷ್ಟಪಡುತ್ತಾರೆ.
ಆರೈಕೆ ಮತ್ತು ಮುನ್ನೆಚ್ಚರಿಕೆಗಳು
ರೋಗ ಪೀಡಿತ ಮಕ್ಕಳಿಗೆ ಸಾಕಷ್ಟು ನೀರು, ಎಳನೀರು, ಅಥವಾ ತಾಜಾ ಹಣ್ಣಿನ ರಸವನ್ನು (ಕಿತ್ತಳೆ ರಸದಂತಹ ಆಮ್ಲೀಯ ರಸಗಳನ್ನು ತಪ್ಪಿಸಿ) ಕುಡಿಸಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು. ಮೃದುವಾದ ಮತ್ತು ತಂಪಾದ ಆಹಾರಗಳನ್ನು (ಉದಾಹರಣೆಗೆ: ಮೊಸರು, ಐಸ್‌ಕ್ರೀಮ್) ನೀಡಿ.ನೋವು ಮತ್ತು ಜ್ವರ ನಿವಾರಕ: ಜ್ವರ ಹಾಗೂ ದೇಹದ ಅಸ್ವಸ್ಥತೆಯನ್ನು ಕಡಿಮೆ ಮಾಡಲು ವೈದ್ಯರ ಸಲಹೆಯ ಮೇರೆಗೆ ಪ್ಯಾರಸಿಟಮಾಲ್ ಬಳಸಬಹುದು.ಮಕ್ಕಳು ಬಳಸಿದ ವಸ್ತುಗಳು ಮತ್ತು ಆಟಿಕೆಗಳನ್ನು ಸ್ವಚ್ಛವಾಗಿಡಿ. ಸೋಂಕಿತ ಮಕ್ಕಳಿಂದ ದೂರವಿಡಬೇಕು ಎಂದು ವೈದರು ಹೇಳುತ್ತಾರೆ.
ಸುಳ್ಯ : ಮಕ್ಕಳಲ್ಲಿ ಕಾಲು ಬಾಯಿ ಜ್ವರದ ಪ್ರಕಣಗಳು ಪತ್ತೆ!

































































