ಗಾಂಧಿ ನಗರ ಕೆ‌.ಪಿ.ಎಸ್. ಪ್ರೌಢಶಾಲಾ ವಿಭಾಗದ ಶಿಕ್ಷಕ ಚಿನ್ನಪ್ಪ ಗೌಡ ಇಂದು ಸೇವಾ ನಿವೃತ್ತಿ

ಸುಳ್ಯ ಗಾಂಧಿನಗರ ಕೆ.ಪಿ.ಎಸ್ ಪ್ರೌಢ ಶಾಲಾ ವಿಭಾಗದ ಸಹಶಿಕ್ಷ ಚಿನ್ನಪ್ಪ ಗೌಡ ಪತ್ರುಕುಂಜ(ಮುಡೂರು) ತಮ್ಮ ಸುಧೀರ್ಘ 35 ವರ್ಷಗಳ ಸೇವೆಯ ಬಳಿಕ ಜು.31ರಂದು ವಯೋನಿವೃತ್ತಿ ಹೊಂದಲಿದ್ದಾರೆ.
ಸುಳ್ಯ ತಾಲ್ಲೂಕು ಆಲೆಟ್ಟಿ ಗ್ರಾಮದ ಪತ್ತುಕುಂಜ ಎಂಬಲ್ಲಿ ದಿ:ಅಣ್ಣಯ್ಯ ಗೌಡ ಮತ್ತು ನೀಲಮ್ಮ ರವರ ೬ ಮಕ್ಕಳಲ್ಲಿ ಕೊನೆಯ ಪುತ್ರನಾಗಿ ದಿನಾಂಕ ೫.೭.೧೯೬೬ರಲ್ಲಿ ಅವರು ಜನಿಸಿದರು.
ಬಾಲ್ಯ: ಪ್ರಾಥಮಿಕ ಶಿಕ್ಷಣವನ್ನು ರಾಮಕೃಷ್ಣ ಅನುದಾನಿತ ಹಿ.ಪ್ರಾ. ಶಾಲೆ ಬಡ್ಡಡ್ಕ ಇಲ್ಲಿ ಪೂರ್ಣಗೋಳಿಸಿರುತ್ತಾರೆ. ಪ್ರೌಢ ಶಿಕ್ಷಣದ ಎರಡು ವರ್ಷ ಮೈಸೂರಿನ ಟಿ.ಎಸ್. ಸುಬ್ಬಣ್ಣ, (ಗಾಂಧೀಜಿಯವರ ಶಿಷ್ಯ)ರವರ ಸಾರ್ವಜನಿಕ ವಿಧ್ಯಾರ್ಥಿ ನಿಲಯ ವಿಧ್ಯಾರಣ್ಯ ಪುರಂ ಇಲ್ಲಿ ಪೂರೈಸಿ, ಎಸ್.ಎಸ್. ಎಲ್.ಸಿ. ಯನ್ನು ಸರಕಾರಿ ಪ .ಪೂ . ಕಾಲೇಜು ಸುಳ್ಯ . ಇಲ್ಲಿ ಪೂರ್ಣಗೊಳಿಸಿರುತ್ತಾರೆ. ಪದವಿಯನ್ನು ನೆಹರೂ ಸ್ಮಾರಕ ಪದವಿ ಕಾಲೇಜಿನಲ್ಲಿ, ಬಿ.ಎಡ್ ಪದವಿಯನ್ನು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿಧ್ಯಾಲಯ ಮಂಗಳೂರು ಇಲ್ಲಿ, ಸ್ನಾತಕೋತ್ತರ ಪದವಿಯನ್ನು, ಮೈಸೂರು ವಿಶ್ವವಿಧ್ಯಾಲಯದಲ್ಲಿ, ಪೂರ್ಣಗೊಳಿಸಿರುತ್ತಾರೆ.
ಸೇವಾವಿವರ: ಬಾಲ್ಯದಿಂದ ಬಡತನದಲ್ಲಿ ಬೆಳೆದ ಇವರು ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿ ಬದುಕನ್ನು ಕಟ್ಟಿಕೊಂಡಿರುತ್ತಾರೆ. ೧೯೯೧ ನೆ ಇಸವಿಯಲ್ಲಿ ಜಿಲ್ಲಾ ಪರಿಷತ್ ಸರ್ಕಾರಿ ಪ್ರೌಢ ಶಾಲೆ ಕರಿಕೆ ,ಕೊಡಗು ಜಿಲ್ಲೆಯಲ್ಲಿ ಗೌರವ ಶಿಕ್ಷಕರಾಗಿ ಜಿಲ್ಲಾ ಪರಿಷತ್ ನಿಂದ ಆಯ್ಕೆಯಾಗಿ ೧೨ ವರ್ಷಗಳ ಕಾಲ ೨೦೦೨ರವರೆಗೆ ಸೇವೆ ಸಲ್ಲಿಸಿರುತ್ತಾರೆ. ೧೯೯೪ರಿಂದ ಮೂಲವೇತನ ೧೯೨೦ ನ್ನು ಮಾತ್ರ ಪಡೆದು , ನಿರಂತರ ಹೋರಾಟದ ಮೂಲಕ ಅನೇಕ ಶಿಕ್ಷಕರ ಖಾಯಮಾತಿಯಾಗಲು ಕಾರಣರಾಗಿದ್ದಾರೆ. ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯದಲ್ಲಿ ಸುಮಾರು ೧೨ ವರ್ಷ ಹೋರಾಟ ಮಾಡಿ, ೨೦೦೪ರ ಸಿ.ಇ.ಟಿ ಪರೀಕ್ಷೆಯಲ್ಲಿ ಖಾಯಂ ಶಿಕ್ಷಕರಾಗಿ, ಆಯ್ಕೆಯಾಗಿ ಸರಕಾರಿ ಪ್ರೌಢ ಶಾಲೆ ಶಂಭೂರು ಬಂಟ್ವಾಳ ತಾಲ್ಲೂಕು ಇಲ್ಲಿ ಖಾಯಂ ಶಿಕ್ಷಕ ವೃತ್ತಿಯನ್ನು ಪ್ರಾರಂಬಿಸಿದರು. ಮುಖ್ಯೋಪಾದ್ಯಾಯರಾಗಿ, ಸಹ ಶಿಕ್ಷಕರಾಗಿ ,೯ ವರ್ಷಗಳ ಸೇವೆಯನ್ನು ಸಲ್ಲಿಸಿದರು. ಈ ಅವಧಿಯಲ್ಲಿ, ಶಾಲೆಯನ್ನು ದತ್ತು ತೆಗೆದುಕೊಳ್ಳಲು ನೆರವಾದರು. ಆ ಮೂಲಕ ಶಾಲೆಯ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಈ ಅವಧಿಯಲ್ಲಿ ರಾಷ್ತçಮಟ್ಟದ ಸಾಂಸ್ಕಂತಿಕ ಶಿಕ್ಷಣ ತರಬೇತಿಯನ್ನು, ೨೦೦೬ರಲ್ಲಿ ದೆಹಲಿಯಲ್ಲಿ, ಮತ್ತು, ೨೦೦೮ ಅಸ್ಸಾಂ, ಹಾಗೂ ೨೦೧೦ರಲ್ಲಿ ತ್ರಿಪುರ ರಾಜ್ಯದ ಅಗರ್ತಲದಲ್ಲಿ ಪಡೆದಿರುತ್ತಾರೆ. ದ..ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶಾಲೆಗೆ ಸಿ,ಸಿ,ಆರ್.ಟಿ. ಕ್ಲಬ್ ನ್ನು ನವದೆಹಲಿಯಿಂದ ಮಂಜೂರು ಮಾಡಿಸಿ ವಾರ್ಷಿಕ ಅನುದಾನ ೫೦೦೦ ಪಡೆಯುವಲ್ಲಿ ಸಫಲರಾಗಿದ್ದಾರೆ. ವಿಧ್ಯಾರ್ಥಿಗಳಿಗೆ, ಪಠ್ಯೇತರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ, ಶಾಲೆಯಲ್ಲಿ ಯಕ್ಷಗಾನ, ಕರಾಟೆ, ಡ್ರಾಯಿಂಗ್, ತರಗತಿಗಳನ್ನು ಹೊರ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ನಡೆಸಿರುತ್ತಾರೆ. ೪ ವರ್ಷಗಳ ಕಾಲ ಶಿಕ್ಷಣ ಸಂಯೋಜಕರಾಗಿ, ತಮ್ಮ ವಲಯದಲ್ಲಿ, ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನಿಸಿರುತ್ತಾರೆ. ವಿಧ್ಯಾರ್ಥಿಗಳಿಗಾಗಿ, ವಲಯದ ಶಾಲೆಗಳ ಶಿಕ್ಷಕರಿಗಾಗಿ ಖಗೋಳ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.
ಹವ್ಯಾಸಗಳು: ಭಾವಗೀತೆ ಹಾಡುವುದು, ನಾಟಕ ,ರಂಗ ಗೀತೆಗಳನ್ನು ರಚಿಸುವುದು, ಸಾಂಸ್ಕöತಿಕ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕವನ ರಚನೆ ಮಾಡುವುದು. ತೋಟಗಾರಿಗೆ ಇತ್ಯಾದಿ.
ಸಾಧನೆಗಳು:- ೨೦೧೧ರಲ್ಲಿ ಗುತ್ತಿಗಾರು ವಲಯದಲ್ಲಿ ಅಂತರರಾಜ್ಯ ಸಾಂಸೃತಿಕ ಹಾಗೂ ಶೈಕ್ಷಣ ಕ ವಿನಿಮಯ ಕಾರ್ಯಕ್ರಮವನ್ನು ( ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ) ಆಯೋಜಿಸಿರುತ್ತಾರೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿವರ್ಗದವರು ಮತ್ತು ಶಿಕ್ಷಕ ಕಲಾವಿಧರು ಭಾಗವಹಿಸಿರುತ್ತಾರೆ.
೨೦೧೧ರಿಂದ ತಾಲ್ಲೂಕಿನ ಆಸಕ್ತ ಶಿಕ್ಷಕರು, ವಿಧ್ಯಾರ್ಥಿ ಕಲಾವಿಧರು, ಬಿ.ರ್.ಸಿ,.ಬಿ.ಆರ್. ಪಿ ಮತ್ತು ಪೋಷಕರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ, ಅಂತರರಾಜ್ಯ ಸಾಂಸ್ಕçತಿಕ,ಹಾಗೂ ಶೈಕ್ಷಣ ಕ ವಿನಿಮಯಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೇರಳ, ತೆಲಂಗಾಣ, ಜಮ್ಮು ಕಾಶ್ಮೀರ, ಮತ್ತು ಉತ್ತರಾಖಂಡಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ರಾಷ್ಟಿಯ ಬಂಧುತ್ವವನ್ನು ಬೆಳೆಸುವ “ ಒಂದು ದೇಶ,ಒಂದು ಕುಟುಂಬ” ಎನ್ನುವ ಪರಿಕಲ್ಪನೆಯನ್ನು ಮೂಡಿಸುವ ಉದ್ದೇಶವನ್ನು ಹೊಂದಿದ್ದಾರೆ. ವಿಧ್ಯಾರ್ಥಿಗಳಿಗಾಗಿ, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ, ೨೦೦೮ ರಲ್ಲಿ”ಪರಿಸರ ಅಧ್ಯಯನ ಕಾರ್ಯಕ್ರಮ,” ಕಾಡಿನಲ್ಲಿ ಒಂದು ದಿನ” ಕಾರ್ಯಕ್ರಮವನ್ನು ತಾಲ್ಲೂಕಿನ ವಿಧ್ಯಾರ್ಥಿಗಳಿಗೆ ನಡೆಸಿಕೊಟ್ಟಿದ್ದಾರೆ. ಪ್ರತಿ ವರ್ಷ ತಾಲೂಕಿನ ವಿಧ್ಯಾರ್ಥಿಗಳಿಗೆ ಚೆನ್ನೆಮಣೆಸ್ಪರ್ಧೆ ಯನ್ನು ನಡೆಸಿ ಸಾಂಸ್ಕöತಿಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ತಾಲೂಕಿನ ಒಳಗೆ ಹೊರಗೆ, ಶೈಕ್ಷಣ ಕ ಶಿಬಿರಗಳನ್ನು ಆಯೋಜಿಸಿ,ವಿಧ್ಯಾರ್ಥಿಗಳಲ್ಲಿ ಸೃಜನಶೀಲತೆಯ ಬೆಳವಣಗೆಗೆ ಕಾರಣಕತರಾಗಿದ್ದಾರೆ. ಈ ವರ್ಷ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆಯಲ್ಲಿ ಅಂತರ ರಾಜ್ಯ ಸಂಗೀತ ಹಬ್ಬ “ ಝೇಂಕಾರ” ಕಾರ್ಯಕ್ರಮ ಆಯೋಜಿಸಿದ್ದಾರೆ.
ಪ್ರಸಕ್ತ ಇವರು ಕರ್ನಾಟಕ ಪಬ್ಲಿಕ್ ಶಾಲೆ ಗಾಂಧಿನಗರ ಸುಳ್ಯ ಇಲ್ಲಿ ಸೇವೆ ಸಲ್ಲಿಸುತ್ತಿದ್ದು. ಸದ್ರಿ ಶಾಲೆಗೆ ಒಂದು ಲಕ್ಷ ರೂ. ಮೌಲ್ಯದ ಧ್ವಜಸ್ತಂಬ ವನ್ನು ದಾನಿಗಳಿಂದ ಒದಗಿಸಿಕೊಟ್ಟಿರುತ್ತಾರೆ. ದಾನಿಗಳಿಂದ ನೆರವಿಂದ ಮತ್ತು ಶಾಸಕರ ನಿಧಿಯಿಂದ ಒಟ್ಟು ಆರು ಲಕ್ಷ ರೂಪಾಯಿ ಅನುದಾನ ಒದಗಿಸಿ, ಸಂಸ್ಥೆಯಲ್ಲಿ, ರಂಗಮಂದಿರ ನಿರ್ಮಾಣ, ಟೈಲ್ಸ್ ಅಳವಡಿಕೆ, ಇಂಟರ್ಲಾಕ್ ಅಳವಡಿಕೆಗೆ ಕಾರಣಕರ್ತರಾಗಿದ್ದಾರೆ. ಶಾಲೆಗೆ ಕೈತೋಟವನ್ನು ನಿರ್ಮಿಸಿದ್ದಾರೆ.ಶಾಲಾ ಹೂತೋಟಕ್ಕೆ ಬೇಕಾದ ಆವರಣ ನಿರ್ಮಾಣಕ್ಕೆ ಇಟ್ಟಿಗೆಯನ್ನು ಸ್ವಂತ ಖರ್ಚಿನಲ್ಲಿ ನೀಡಿದ್ದಾರೆ. ದಾನಿಗಳ ನೆರವಿಮಿಂದ ನೀರಿನ ಪೈಪ್ ಅಳವಡಿಸಿದ್ದಾರೆ.
೨೦೧೮ ರಲ್ಲಿ ಇವರ ಸಾಧನೆಗೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಒಲಿದು ಬಂದಿದೆ.ಸುವಿಚಾರ ಸಾಹಿತ್ಯ ವೇದಿಕೆಯ ಸಕ್ರಿಯ ಕಾರ್ಯಕರ್ತರಾಗಿ, ಸರಕಾರಿ ಪ್ರೌಢಶಾಲಾ ಶಿಕ್ಷಕ ತಾಲ್ಲೂಕು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರಿ ನೌಕರ ಸಂಘದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಧ್ಯಾರ್ಥಿಗಳ ಮೌಲ್ಯಾಭಿವೃದ್ಧಿಗೆ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಶೈಕ್ಷಣ ಕ , ಹಾಗೂ ಸಾಂಸ್ಕöತಿಕ ಚಟುವಟಿಕೆಯನ್ನು ನಿರಂತರವಾಗಿ ಹಮ್ಮಿಕೊಂಡುಬರುತ್ತಿದ್ದಾರೆ.



































































































































Leave a Comment

Your email address will not be published. Required fields are marked *

error: Content is protected !!
Scroll to Top