ಆಗಸ್ಟ್ 09 ರಂದು ಪಂಜದಲ್ಲಿ ಆಟಿ ನೆಂಪು 2026 ಕಾರ್ಯಕ್ರಮ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಹೇಳಿಕೆ

ಸುಳ್ಯ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಜೇಸಿಐ ಪಂಜ ಪಂಚಶ್ರೀ ಲಯನ್ಸ್ ಕ್ಲಬ್ ಪಂಜ ಇವರ ಸಹಕಾರದಲ್ಲಿ ಆಟಿ ತಿಂಗಳಿನ ಮಹತ್ವ ಮತ್ತು ನಮ್ಮ ಪೂರ್ವಜರು ಆಟಿ ತಿಂಗಳಿನಲ್ಲಿ ಆಚರಿಸುತ್ತಿದ್ದ ಆಚರಣೆಗಳು ಮತ್ತು ಸೇವಿಸುತ್ತಿದ್ದ ಆಹಾರಗಳ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿತೆ ನೀಡುವಂತ ಆಟಿ ನೆಂಪು-2026 ಕಾರ್ಯಕ್ರಮವು ಆಗಸ್ಟ್ 09 ರಂದು ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಿಳಿಸಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳಗ್ಗೆ 10.00 ಗಂಟೆಯಿಂದ ಉದ್ಘಾಟನಾ ಕಾರ್ಯಕ್ರಮದ ನಡೆಯಲಿದೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಇಂಜಾಡಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಸ್ಪರ್ಧೆಗಳು ನಡೆಯಲಿದೆ.
ಗಂಟೆ 12.00 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತೆ ಮತ್ತು ಕಲಾವಿದರಾದ ಕೊಡಗಿನ ಶ್ರೀಮತಿ ಮಿಲನ ಭರತ್ ಇವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ, ಸರಣಿ ತರಬೇತಿ ಮತ್ತು ಇತರ ತರಬೇತಿ ವಿಭಾಗ, ವಲಯ 15, ಜೇಸಿಐ ಭಾರತ ಇದರ ವಲಯ ಸಂಯೋಜಕರಾದ ಜೇಸಿ ಭಾಗ್ಗೇಶ್ ರೈ, ಲಯನ್ಸ್ ಜಿಲ್ಲಾ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ, ಜಿಲ್ಲೆ 317-D ಲಯನ್ mjf ಜಯರಾಮ್ ದೇರಪ್ಪಜ್ಜನಮನೆ, ಶ್ರೀ ಪರಿವಾರ ಸಮಿತಿ ಅಧ್ಯಕ್ಷರಾದ ಪಂಚಲಿಂಗೇಶ್ವರ ದೇವಸ್ಥಾನ, ಡಾ. ದೇವಿಪ್ರಸಾದ್ ಕಾನತ್ತೂರು, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹೇಶ್‌ ಕುಮಾರ್ ಕರಿಕ್ಕಳ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಟಿ ನೆಂಪು ಕಾರ್ಯಕ್ರಮದ ಅಂಗವಾಗಿ ವಾಟ್ಸಾಪ್‌ನಲ್ಲಿ ಅರೆಭಾಷೆ ಸ್ವರಚಿತ ಕವನ ಸ್ಪರ್ಧೆ, ಚಿನ್ನೆಮಣೆ ಸ್ಪರ್ಧೆ, ಅರೆಭಾಷೆ ಪ್ರಹಸನ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅರೆಭಾಷೆ ಭಾಷಣ ಸ್ಪರ್ಧೆ, ಆಟಿ ಖಾದ್ಯ ಸ್ಪರ್ಧೆ, ನೀರ್ ದೋಸೆ ಹೊಯ್ಯುವ ಸ್ಪರ್ಧೆ ಮತ್ತು ಹಸಿ ತರಕಾರಿಗಳ ಆಲಂಕಾರಿಕವಾಗಿ ಜೋಡಿಸುವ ಸ್ಪರ್ಧೆಗಳು ನಡೆಯಲಿದೆ.
ಸಂಜೆ 6.30 ಗಂಟೆಯಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಸ್ತುತಪಡಿಸುವ ಲೋಕೇಶ್ ಊರುಬೈಲ್‌ರವರ ನಿರ್ದೇಶನದ ಹೆಸರಾಂತ ‘ಅಪ್ಪ’ ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ ನೇರಳ ಅವರು ಮಾತನಾಡಿ ಆಟಿ ನೆಂಪು ಕಾರ್ಯಕ್ರಮದ ಪ್ರಯುಕ್ತ ಪಂಜದಲ್ಲಿ ಪ್ರಪ್ರಥಮ ಬಾರಿಗೆ ಟೀಮ್ ಉಬಾರ್ ಇವರ ನೇತೃತ್ವದಲ್ಲಿ ಸ್ವದೇಶಿ ಖಾದ್ಯ ಮೇಳ ನಡೆಯಲಿದೆ. ವಿವಿದ ಜಿಲ್ಲೆಗಳಿಂದ ಆಗಮಿಸಿರುವ ವಿಶಿಷ್ಟ ತಿಂಡಿ-ತಿನಿಸುಗಳು, ಸ್ವದೇಶಿ ಮಸಾಲೆ ಪದಾರ್ಥಗಳು, ಕೈಮಗ್ಗ ಸೀರೆಗಳು, ಕರಕುಶಲ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ಇನ್ನೂ ಅನೇಕ ವಿಶೇಷ ಸ್ಟಾಲ್‌ಗಳು ಮೇಳದ ಪ್ರಮುಖ ಆಕರ್ಷಣೆಗಳು.
ಈ ಕಾರ್ಯಕ್ರಮದಲ್ಲಿ ಅರೆಭಾಷೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ದೇವಿಪ್ರಸಾದ್ ಚಿಕ್ಕುಳಿ
ವಿಜೇಶ್ ಹಿರಿಯಡ್ಕ
ವಾಸುದೇವ ಮೇಲ್ಪಾಡಿ ಉಪಸ್ಥಿತರಿದ್ದರು.



































































































































Leave a Comment

Your email address will not be published. Required fields are marked *

error: Content is protected !!
Scroll to Top