ಪಂಜ : ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ, ಆಚಾರ-ವಿಚಾರ, ಸಾಲ-ಲೆಕ್ಕಪತ್ರ, ನಿಶ್ಚಿತ ಠೇವಣಿ, ಸಿಬಂದಿ ವಜಾ, ತೋಟದ ಗುತ್ತಿಗೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಭಕ್ತರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಉದ್ದೇಶದಿಂದ ಸಾರ್ವಜನಿಕ ಸಭೆ ಕರೆದು ಮಾಹಿತಿ ನೀಡುವಂತೆ ಭಕ್ತರ ನಿಯೋಗವೊಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಮನವಿ ಸಲ್ಲಿಸಿದೆ.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಸಾವಿರ ಸೀಮೆಯ ಭಕ್ತಾದಿಗಳ ಹೆಸರಿನಲ್ಲಿ ಸಲ್ಲಿಸಲಾದ ಮನವಿ ಪತ್ರವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ। ದೇವಿಪ್ರಸಾದ್ ಕಾನತ್ತೂರು ಅವರಿಗೆ ನೀಡಲಾಯಿತು.
ಆ.15ರಂದು ಭಕ್ತಾದಿಗಳ ಸಾರ್ವಜನಿಕ ಸಭೆ ನಡೆಸಿ ಎಲ್ಲ ಗೊಂದಲ ಗಳಿಗೆ ಸ್ಪಷ್ಟನೆ ನೀಡುವಂತೆ ಮನವಿ ಯಲ್ಲಿ ಆಗ್ರಹಿಸಲಾಗಿದೆ.
ನಿಯೋಗದಲ್ಲಿ ಚಂದ್ರಶೇಖರ ಶಾಸ್ತ್ರಿ ಪ್ರಕಾಶ್ ಜಾಕೆ, ಶಂಕರ ಭಟ್ ಮುಚ್ಚಿಲ, ಮೋನಪ್ಪ ಗೌಡ ಬೊಳ್ಳಾಜೆ, ಕಿರಣ್ ನೆಕ್ಕಿಲ, ಲೋಕೇಶ್ ಬರೆಮೇಲು, ಶರತ್ ಕುದ್ದ, ಉಜ್ವಲ್ ಚಿದ್ದಲ್, ಲೋಕೇಶ್ ಕಲ್ಲಾಜೆ, ಜಯರಾಮ ಕಲ್ಲಾಜೆ, ಚಿನ್ನಪ್ಪ ಚೊಟ್ಟೆಮಜಲು, ಲಗೋಧರ ಆಚಾರ್ಯ, ಪ್ರಜ್ವಲ್ ಚಿದ್ದಲ್, ಕಾರ್ಯಪ್ಪ ಗೌಡ ಚಿದ್ದಲ್, ಅಂಕುಶ್ ಕುದ್ದ, ದಯಾನಂದ ಮೇಲ್ಮನೆ. ಸೇರಿದಂತೆ
ಮನವಿ ಸ್ವೀಕರಿಸಿದ ಡಾ| ದೇವಿಪ್ರಸಾದ್ ಕಾನತ್ತೂರು ಮಾತನಾಡಿ, ಮನವಿಯಲ್ಲಿ ಪ್ರಸ್ತಾಪಿಸಿರುವ ಪ್ರತಿಯೊಂದು ವಿಷಯಕ್ಕೂ ಆಡಳಿತ ಮಂಡಳಿಯ ಬಳಿ ಸಮರ್ಪಕ ಉತ್ತರಗಳಿವೆ. ಆದ್ದರಿಂದ ಆ.15ರಂದು ಮಧ್ಯಾಹ್ನ 3 ಗಂಟೆಗೆ ದೇವಸ್ಥಾನದ ಸಭಾಭವನದಲ್ಲಿ ಭಕ್ತಾದಿಗಳ ಸಭೆ ನಡೆಸಿ ಎಲ್ಲ ವಿಷಯಗಳ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಪಂಜ ದೇವಸ್ಥಾನ: ಸಭೆ ಕರೆದು ಗೊಂದಲಗಳಿಗೆ ಸ್ಪಷ್ಟನೆ ನೀಡಲಾಗುವುದು : ಡಾ| ದೇವಿಪ್ರಸಾದ್













