ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ,
ಪ್ರತಾಪ ಯುವಕ ಮಂಡಲ (ರಿ) ಅಜ್ಜಾವರ ಹಾಗೂ
ಚೈತ್ರ ಯುವತಿ ಮಂಡಲ (ರಿ) ಅಜ್ಜಾವರ ವತಿಯಿಂದ
ನಡೆಯಲಿರುವ 5ನೇ ವರ್ಷದ “ಕಂಡದ ಗೌಜಿ ಕೆಸರ್ದ ಪರ್ಬ” ಕ್ರೀಡಾಕೂಟದ ಪೂರ್ವಭಾವಿಯಾಗಿ
ಆ.4ರಂದು ಗದ್ದೆ ಮುಹೂರ್ತ ಕಾರ್ಯಕ್ರಮ ನಡೆಯಿತು. ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ
ಪ್ರಸಾದ್ ರೈ ಮೇನಾಲ ಗದ್ದೆ ಮೂಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಅಜ್ಜಾವರ ಕೊರಂಗುಬೈಲು ಗದ್ದೆಯ ಮಾಲಕರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ನಾಯ್ಕ್ ಹಾಗೂ ಲೀಲಾಬಾಲಕೃಷ್ಣ ನಾಯ್ಕ್ ,ಪ್ರತಾಪ ಯುವಕ ಮಂಡಲ ಅಧ್ಯಕ್ಷರಾದ ಗುರುರಾಜ್, ಕಾರ್ಯದರ್ಶಿ ನವೀನ್ ಕೂಕುಲುಮಜಲು, ಕೋಶಾಧಿಕಾರಿ ಲೋಕೇಶ್ ರಾವ್,ಪತ್ರಿಕಾ ವರದಿಗಾರರಾದ ರಮೇಶ್ ಮೇದಿನಡ್ಕ, ಕ್ರೀಡಾ ಜೊತೆಕಾರ್ಯದರ್ಶಿ ವಿನಯ್ ನಾರಲು,ಸದಸ್ಯರಾದ ರವಿ ನಾರಲು,ಧವನ್ ರಾಜ್,ಚೈತ್ರ ಯುವತಿ ಮಂಡಲ ಅಜ್ಜಾವರ ಇದರ ಅಧ್ಯಕ್ಷೆ ಶಶ್ಮಿ ಭಟ್ ಹಂಚಿನಮನೆ , ಗೌರವಸಲಹೆಗಾರರಾದ ಜಯಲಕ್ಷ್ಮಿ ಸಂಜೀವ ರಾವ್, ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳಾದ ಕು.ಧರಿತ್ರಿ, ಕು.ತ್ರಿಷಾ,ಕು.ಹರಿಣಿ ಶಾಂತಿಮಜಲು, ಭುವನಶ್ರೀ ವಿನಯ್, ಹಾಗೂ ಸುಕುಮಾರ ಮೇನಾಲ, ಕೀರ್ತಿರಾಜ್ ಉಪಸ್ಥಿತರಿದ್ದರು.













