ಸಂಪಾಜೆ ಗ್ರಾಮದ ಕೀಲಾರು ಹೊಳೆಯ ಕಿಂಡಿ ಅಣೆಕಟ್ಟಿಗೆ ಭಾರೀ ಮಳೆಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದು ಅಡ್ಡವಾಗಿ ನಿಂತಿದ್ದ ಮರ ಮತ್ತು ಪೊದೆ ಕಸಗಳನ್ನು ಯುವ ಕಾಂಗ್ರೆಸ್ ಕಾರ್ಯಪಡೆ ವತಿಯಿಂದ ಜು.4ರಂದು ತೆರವು ಮಾಡಲಾಯಿತು.
ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ. ಕೆ ಹಮೀದ್ ಮತ್ತು ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ದೊಡ್ಡಡ್ಕ ಇವರ ನೇತೃತ್ವ ವಹಿಸಿದ್ದರು.
ಕೀಲಾರು ಕಿಂಡಿ ಅಣೆಕಟ್ಟು ಬೇಸಿಗೆಯಲ್ಲಿ ಕೃಷಿಕರಿಗಾಗಿ ನೀರು ಸಂಗ್ರಹಿಸಲು ನಿರ್ಮಿಸಲಾಗಿದ್ದು,ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮರ ಪೊದೆ ಇತ್ಯಾದಿಗಳು ಬಂದು ಅಡ್ಡವಾಗಿ ನಿಂತಿದ್ದವು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನ ಪ್ರಮುಖರಾದ ರಾಜಶೇಖರ್, ವಿನೀತ್, ರಾಮಕೃಷ್ಣ ಮತ್ತು ಜೋಸೆಫ್ ಶ್ರಮದಾನದಲ್ಲಿ ತೊಡಗಿದರು.
ಸುಳ್ಯ ತಹಶೀಲ್ದಾರರಿಗೆ ಮತ್ತು ಸಂಪಾಜೆ ಗ್ರಾಮ ಪಂಚಾಯತ್ ನ ಗಮನಕ್ಕೆ ತಂದರು ಕೂಡ ಅಧಿಕಾರಿಗಳು ಸ್ಪಂದಿಸದಿದ್ದಾಗ ಸಂಪಾಜೆ ಯುವ ಕಾಂಗ್ರೆಸ್ ಕಾರ್ಯಪಡೆಯ ಮೂಲಕ ಮರ ಪೊದೆ ಇತ್ಯಾದಿಗಳನ್ನು ತೆರವು ಮಾಡುವ ಕೆಲಸ ಮಾಡುತ್ತಿದ್ದೇವೆ. ಇದನ್ನು ಹೀಗೆ ಬಿಟ್ಟರೆ ಕಿಂಡಿ ಅಣೆಕಟ್ಟಿನ ಪಿಲ್ಲರ್ ಮುರಿದುಹೋಗುವ ಸಾಧ್ಯತೆ ಇದೆ ಎಂದು ಜಿ.ಕೆ.ಹಮೀದ್ ಹೇಳಿದ್ದಾರೆ.
ಸಂಪಾಜೆ : ಯುವ ಕಾಂಗ್ರೆಸ್ ವತಿಯಿಂದ ಅಣೆಕಟ್ಟಿಗೆ ಸಿಲುಕಿಕೊಂಡಿದ್ದ ಮರ ಮತ್ತು ಪೊದೆಗಳ ತೆರವು













