ಭಾರತೀಯ ಸಂವಿಧಾನವು ಆದೇಶಿಸುವ ಖಾಝಿ ಕಾಯಿದೆಯ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ: ಜಿಫ್ರಿ ತಂಙಳ್

ಸುಳ್ಯ: ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಆ. 4ರಂದು ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ‘ಭಾರತೀಯ ಸಂವಿಧಾನವು ಆದೇಶಿಸುವ, ಭಾರತದಲ್ಲಿರುವ ಖಾಝಿ ಕಾಯಿದೆಯು ಸೂಚಿಸುವ ಮಾನ್ಯತೆ ಪಡೆದ ಕಾನೂನುಗಳು ಹಾಗೂ ಅದರಲ್ಲಿ ಒಳಗೊಂಡ ವಿಷಯಗಳನ್ನು ಮಾತ್ರ ಖಾಝಿಯಾಗಿ ನನಗೆ ಮಾಡಲು ಸಾಧ್ಯ. ಅದಲ್ಲದ್ದನ್ನು ಮಾಡಲು ಸಾಧ್ಯವಿಲ್ಲ. ಹಾಗಾಗಿ, ಈ ಭಾರತೀಯ ಸಂವಿಧಾನಕ್ಕೂ ಮತ್ತು ಇಲ್ಲಿನ ಖಾಝಿ ಕಾಯಿದೆಗೂ ಯಾವುದೇ ರೀತಿಯಲ್ಲಿ ವಿರೋಧವಾಗದಂತೆ, ನಮಗೆ ಸಂಬಂಧಿಸಿದ ಇತರ ವಿಷಯಗಳಲ್ಲಿ ಮಧ್ಯಪ್ರವೇಶಿಸಿ ಅದಕ್ಕೆ ಬೇಕಾದದ್ದೆಲ್ಲವನ್ನೂ ನಾನು ಮಾಡಬಲ್ಲೆ. ಅದಕ್ಕೆ ನಿಮ್ಮೆಲ್ಲರ ಸಹಾಯ ಹಾಗೂ ಸಹಕಾರಗಳು ಅತ್ಯಗತ್ಯ ಎಂದರು. ಅಬ್ದುಲ್ ಸಲಾಂ ಬಾಖವಿ ಮುಖ್ಯ ಪ್ರಭಾಷಣ ಮಾಡಿದರು. ಸುಳ್ಯ ತಾಲೂಕು ಸಂಯುಕ್ತ ಜಮಾಅತ್‌ನ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು, ಶೈಖುನಾ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಶೈಖುನಾ ಅಬ್ದುಲ್ಲಾ ಫೈಝಿ ಮುಸ್ಲಿಯಾರ್ ಕೊಡಗು, ಸಮಸ್ತ ಮುಶಾವರ ಕರ್ನಾಟಕ ಅಧ್ಯಕ್ಷ ಸಯ್ಯದ್ ಝೈನುಲ್ ಆಬಿದೀನ್ ತಂಙಳ್, ದುಗಲಡ್ಕ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ, ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಇಸಾಕ್ ಹಾಜಿ ಪಾಜಪಳ್ಳ, ಮೂಸ ಕುಂಞಿ ಪೈಂಬೆಚ್ಚಾಲ್, ಸಯ್ಯದ್ ಅಮೀರ್ ತಂಙಳ್ ಕಿನ್ಯ, ಸಯ್ಯದ್ ಅಕ್ರಂ ಅಲಿ ತಂಙಳ್, ಸಯ್ಯದ್ ಹಕೀಂ ತಂಙಳ್ ಆದೂರು, ಅನೀಶ್ ಕೌಸರಿ ಮತ್ತಿತರರು ಉಪಸ್ಥಿತರಿದ್ದರು.
ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ, ಕೋಶಾಧಿಕಾರಿ ಹಮೀದ್ ಹಾಜಿ, ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್, ಸಂಘಟನಾ ಕಾರ್ಯದರ್ಶಿ ಜಮಾಲ್ ಬೆಳ್ಳಾರೆ, ಸುಳ್ಯ ತಾಲೂಕು ಮದ್ರಸಾ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಕಾರ್ಯದರ್ಶಿ ಯು.ಪಿ. ಬಶೀರ್ ಬೆಳ್ಳಾರೆ, ಎಸ್‌ಕೆಎಸ್‌ಎಸ್‌ಎಫ್ ವಲಯಾಧ್ಯಕ್ಷ ಅಬೂಬಕ್ಕರ್ ಪೂಪಿ, 13 ಜಮಾಅತ್‌ಗಳ ಅಧ್ಯಕ್ಷರುಗಳು, ಮತ್ತಿತರರು ಉಪಸ್ಥಿತರಿದ್ದರು.
ನಹೀಂ ಫೈಝಿ ಸ್ವಾಗತಿಸಿದರು. ಖಾಝಿ ಬೈಯತ್ ನಿರ್ವಹಣೆಯನ್ನು ಹಸನ್ ಅಷಾದಿ ಬೆಳ್ಳಾರೆ, ಮಹಮ್ಮದ್ ನವವಿ ಮುಂದೋಳೆ ನೆರವೇರಿಸಿದರು. ಅದ್ನಾನ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು



















Leave a Comment

Your email address will not be published. Required fields are marked *

error: Content is protected !!
Scroll to Top