ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ

ಅರಂತೋಡು ಹಾಲು ಉತ್ಪಾದಕರ ಸಹಕಾರ ಸಂಘದ 2025-26 ನೇ ಸಾಲಿನ ಮಹಾಸಭೆಯು ಸಂಘದ ಅಧ್ಯಕ್ಷರಾದ ಮೋಹನ ಅಡ್ತಲೆ ಇವರ ಅಧ್ಯಕ್ಷತೆಯಲ್ಲಿ ಅರಂತೋಡು ರಬ್ಬರ್ ಉತ್ಪಾದಕರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯದರ್ಶಿ ವಿಮಲಾ ಪೈಕ ವರದಿ ಮಂಡಿಸಿ ಸಭೆಯ ಅನುಮೋದನೆ ಪಡೆಯಲಾಯಿತು. ಮುಖ್ಯ ಅತಿಥಿಗಳಾಗಿ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಶಿವಕುಮಾರ್ ಹಾಲಿನ ಗುಣಮಟ್ಟ ಹಾಗೂ ಇಳುವರಿ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷರು ಮಾತನಾಡಿ ಕಳೆದ ವರ್ಷ ನಮ್ಮ ಸಂಘದಲ್ಲಿ ದಿನಕ್ಕೆ 250 ಲೀ. ಇದ್ದ ಹಾಲು ಈ ಬಾರಿ 500 ಲೀ ಆಗಿದ್ದು ಸದಸ್ಯರಿಗೆ ಪ್ರತಿ ಲೀ. ಗೆ 0.99 ಪೈಸೆ ಬೋನಸ್ ನೀಡಲಾಗುವುದು ಎಂದು ಘೋಷಿಸಿದರು. ಇನ್ನಷ್ಟು ಹೆಚ್ಚಾಗಲು ಸಂಘದಿಂದ ಅಗತ್ಯ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ತಮಿಳುನಾಡಿನ ಈರೋಡ್ ಪ್ರದೇಶದ ಉತ್ತಮ ಹಾಲಿನ ಗುಣಮಟ್ಟ ಇರುವ ಹೆಚ್.ಎಫ್ ತಳಿಯ ಹಸುಗಳು ನಮ್ಮ ಹವಾಮಾನಕ್ಕೆ ಹೊಂದಿಕೊಳ್ಳುವ ತಳಿಯಾಗಿದ್ದು ಸದಸ್ಯರುಗಳಿಗೆ ಅಗತ್ಯವಿದ್ದಲ್ಲಿ ಸಂಘ ಹಾಗೂ ಒಕ್ಕೂಟದ ಕಡೆಯಿಂದ ಸಹಕಾರ ನೀಡುವುದಾಗಿ ತಿಳಿಸಿದರು. ಈಗಾಗಲೇ ಅಡ್ತಲೆಯಲ್ಲಿ ಮಿನಿ ಡೈರಿ ಆರಂಭಿಸಿದ್ದು ಸುಮಾರು 12 ಸದಸ್ಯರು ದಿನಕ್ಕೆ ಸುಮಾರು 100 ಲೀ. ಅಧಿಕ ಹಾಲು ಹಾಕುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಅಧಿಕ ಹಾಲು ಹಾಕುವ 10 ಸದಸ್ಯರನ್ನು ಹಾಗೂ ಈರೋಡಿನಿಂದ 10 ಹಸುಗಳನ್ನು ತಂದ ಸದಸ್ಯರನ್ನು ಸನ್ಮಾನಿಸಲಾಯಿತು. ಸದಸ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಭೆಗೆ ದೀಪ್ತಿ ಪೈಕ ಪ್ರಾರ್ಥಿಸಿ ಭಾರತಿ ಉಳುವಾರು ಸ್ವಾಗತಿಸಿದರು. ಮಾಲಿನಿ ಉಳುವಾರು ಧನ್ಯವಾದಗೈದರು.ಸಭೆಯಲ್ಲಿ ಸಂಘದ ಉಪಾಧ್ಯಕ್ಷರು,ನಿರ್ದೇಶಕರುಗಳು, ಸದಸ್ಯರುಗಳು ಭಾಗವಹಿಸಿದರು



















Leave a Comment

Your email address will not be published. Required fields are marked *

error: Content is protected !!
Scroll to Top