ಸುಳ್ಯ: ರಾಜ್ಯ ಶಸ್ತ್ರಚಿಕಿತ್ಸಕರ ಸಂಘ (KSCASI) ಹಾಗೂ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ “From Basics to Mastery” ಎಂಬ ಧ್ಯೇಯದೊಂದಿಗೆ 9ನೇ ಮಧ್ಯವಾರ್ಷಿಕ ರಾಜ್ಯಮಟ್ಟದ ಶಸ್ತ್ರಚಿಕಿತ್ಸಕರ ಸಮ್ಮೇಳನ KSCASI-midCON 2026 ಅನ್ನು ಆಗಸ್ಟ್ 7 ರಿಂದ 9ರವರೆಗೆ ಸುಳ್ಯದ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು
KSCASI ಅಧ್ಯಕ್ಷೆ ಡಾ. ನಾಜ್ ಜಹಾನ್ ಶೇಖ್ ತಿಳಿಸಿದ್ದಾರೆ.
ಅವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮೂರು ದಿನಗಳ ವೈಜ್ಞಾನಿಕ ಸಮ್ಮೇಳನದಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳಿಂದ 400ಕ್ಕೂ ಅಧಿಕ ಪ್ರತಿನಿಧಿಗಳು, ತಜ್ಞ ವೈದ್ಯರು, ಅಧ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಸಮ್ಮೇಳನದ ಅಂಗವಾಗಿ ಸಾರ್ವಜನಿಕರಿಗಾಗಿ ವಾಕ್ಥಾನ್, ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೂರು ದಿನಗಳ ಸಮ್ಮೇಳನದಲ್ಲಿ ತಜ್ಞರ ಉಪನ್ಯಾಸಗಳು, ಪ್ಯಾನಲ್ ಚರ್ಚೆಗಳು, ಸಿಂಪೋಸಿಯಂಗಳು, ವೀಡಿಯೊ ಆಧಾರಿತ ಶಸ್ತ್ರಚಿಕಿತ್ಸಾ ಪ್ರದರ್ಶನಗಳು, ಸರ್ಜಿಕಲ್ ಕ್ವಿಜ್, Award Papers, Free Papers ಹಾಗೂ E-Poster ಪ್ರಸ್ತುತಿಗಳು ನಡೆಯಲಿವೆ. ಸಮ್ಮೇಳನದಲ್ಲಿ 70ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಹಾಗೂ 150ಕ್ಕೂ ಅಧಿಕ ಪೋಸ್ಟರ್ಗಳು ಪ್ರದರ್ಶನಗೊಳ್ಳಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಶಸ್ತ್ರಚಿಕಿತ್ಸಕರು, ತಜ್ಞ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಆಗಸ್ಟ್ 8ರಂದು ಸಂಜೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾ. ಬಿ.ಎಲ್. ಸುಜಾತಾ ರಾಥೋಡ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ (AOLE) ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಆತಿಥ್ಯದಲ್ಲಿ ನಡೆಯುವ ಈ ಸಮ್ಮೇಳನವು ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿನ ಇತ್ತೀಚಿನ ಜ್ಞಾನ, ತಂತ್ರಜ್ಞಾನ ಹಾಗೂ ಚಿಕಿತ್ಸಾ ವಿಧಾನಗಳ ವಿನಿಮಯಕ್ಕೆ ಮಹತ್ವದ ವೇದಿಕೆಯಾಗಲಿದೆ.
ಕಾರ್ಯಕ್ರಮದ ವಿವರಗಳು
ಮೊದಲ ದಿನ: ವಾಕ್ಥಾನ್ ಹಾಗೂ ಮಧುಮೇಹ ಪಾದ ತಪಾಸಣಾ ಶಿಬಿರ
ಸಮ್ಮೇಳನದ ಪೂರ್ವಭಾವಿಯಾಗಿ ಆಗಸ್ಟ್ 7ರಂದು ಬೆಳಿಗ್ಗೆ 8 ಗಂಟೆಗೆ “Let’s Walk to a Healthier Tomorrow” ಘೋಷವಾಕ್ಯದಡಿ ವಾಕ್ಥಾನ್ ಹಾಗೂ ಮಧುಮೇಹ ಪಾದ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ನಯಾಪಡದ N-STRIDE ಹಾಗೂ Indian Podiatry Association (IPA) ಸಹಯೋಗದಲ್ಲಿ ನಡೆಸಲಾಗುತ್ತಿದೆ.
ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಮಧುಮೇಹ ಪಾದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕ್ಥಾನ್ ನಡೆಯಲಿದ್ದು, ಬಳಿಕ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರ ನಡೆಯಲಿದೆ.
ಆ.೦8 ರಂದು ವೈಜ್ಞಾನಿಕ ಅಧಿವೇಶನಗಳು ಹಾಗೂ ಉದ್ಘಾಟನಾ ಸಮಾರಂಭ
ಸಂಜೆ 6.30 ಗಂಟೆಗೆ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶಕರಾದ ಡಾ. ಬಿ.ಎಲ್. ಸುಜಾತಾ ರಾಥೋಡ್ ಭಾಗವಹಿಸಲಿದ್ದಾರೆ.
ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ (AOLE) ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಎಎಸ್‌ಐ ಇಂಡಿಯಾದ ಗೌರವ ಕಾರ್ಯದರ್ಶಿ ಡಾ. ಗಡ್ಡಿ ದಿವಾಕರ್, ಎಎಸ್‌ಐ ಸಾಮಾಜಿಕ ಕಲ್ಯಾಣ ಮಂಡಳಿಯ ನಿರ್ದೇಶಕ ಡಾ. ಜಿ. ಸಿದ್ದೇಶ್ ಹಾಗೂ ಎಎಸ್‌ಐ ಶೈಕ್ಷಣಿಕ ಮಂಡಳಿಯ ನಿರ್ದೇಶಕ ಡಾ. ರಾಜಗೋಪಾಲ್ ಶೆಣೈ ಕೆ, KSCASI ಗೌರವ ಕಾರ್ಯದರ್ಶಿ ಡಾ ಸರ್ವೇಶ್ ರಾಜ್, ಖಜಾಂಜಿ ಡಾ ಗುರುಬಸವನ ಗೌಡ ವೈ, ಡಾ ರಾಜ್ ಶೇಖರ್ ಸಿ ಜಕ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥರು ಹಾಘೂ ಕಾರ್ಯಕ್ರಮದ ಸಂಘಟನಾ ಅಧ್ಯಕ್ಷರಾದ ಡಾ ಗೋಪಿನಾಥ್ ಪೈ, ಸಂಘಟನಾ ಕಾರ್ಯದರ್ಶಿ ಡಾ ರಂಜಿತ್ ಕೆ ಬಿ ಉಪಸ್ಥಿತರಿರಲಿದ್ದಾರೆ.
ಸಮ್ಮೇಳನದ ಅಧ್ಯಕ್ಷತೆಯನ್ನು KSCASI ಅಧ್ಯಕ್ಷೆ ಡಾ. ನಾಜ್ ಜಹಾನ್ ಶೇಖ್ ವಹಿಸಲಿದ್ದಾರೆ.
ಆ.೦9 ರಂದು ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ಸಮಾರೋಪ ಸಮಾರಂಭ
ಸಮ್ಮೇಳನದ ಎರಡನೇ ದಿನವೂ ವಿವಿಧ ವೈಜ್ಞಾನಿಕ ಅಧಿವೇಶನಗಳು, ತಜ್ಞರ ಉಪನ್ಯಾಸಗಳು, ಪ್ಯಾನಲ್ ಚರ್ಚೆಗಳು ಹಾಗೂ ಶಸ್ತ್ರಚಿಕಿತ್ಸಾ ವಿಷಯಾಧಾರಿತ ಪ್ರಾತ್ಯಕ್ಷಿಕೆಗಳು ನಡೆಯಲಿವೆ. ರಾಜ್ಯದ ವಿವಿಧ ವೈದ್ಯಕೀಯ ಕಾಲೇಜುಗಳು ಹಾಗೂ ಆಸ್ಪತ್ರೆಗಳಿಂದ ಆಗಮಿಸಿದ ಶಸ್ತ್ರಚಿಕಿತ್ಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಪ್ರತಿನಿಧಿಗಳು ಈ ಅಧಿವೇಶನಗಳಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಒಟ್ಟು 70ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು (Free Papers ಹಾಗೂ Award Papers) ಮಂಡನೆಯಾಗಲಿದ್ದು, 150ಕ್ಕೂ ಅಧಿಕ ಇ-ಪೋಸ್ಟರ್ ಹಾಗೂ ಪೋಸ್ಟರ್ಗಳನ್ನು ಪ್ರದರ್ಶಿಸಲಾಗುತ್ತಿದೆ. ಇವು ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿನ ಹೊಸ ಸಂಶೋಧನೆಗಳು, ಚಿಕಿತ್ಸಾ ವಿಧಾನಗಳು ಹಾಗೂ ವೈದ್ಯಕೀಯ ಅನುಭವಗಳ ವಿನಿಮಯಕ್ಕೆ ವೇದಿಕೆಯಾಗಲಿವೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ
KSCASI ಗೌರವ ಕಾರ್ಯದರ್ಶಿ ಡಾ ಸರ್ವೇಶ್ ರಾಜೆ ಅರಸ್ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಸುಳ್ಯ ಅಧ್ಯಕ್ಷರು ಡಾ ಕೆವಿ ಚಿದಾನಂದ
ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥರು ಹಾಘೂ ಕಾರ್ಯಕ್ರಮದ ಸಂಘಟನಾ ಅಧ್ಯಕ್ಷರಾದ ಡಾ ಗೋಪಿನಾಥ್ ಪೈ,
ಸಂಘಟನಾ ಕಾರ್ಯದರ್ಶಿ ಡಾ ರಂಜಿತ್ ಕೆ ಬಿ
ಸ್ತ್ರೀ ಮತ್ತು ಪ್ರಸೂತಿ ಮುಖ್ಯಸ್ಥರು ಡಾ ಗೀತಾ ದೊಪ್ಪ
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸರ್ಜರಿ ವಿಭಾಗದ ಡಾ ಸಾಯಿ ಗೀತಾ ಉಪಸ್ಥಿತರಿದ್ದರು.













