ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ಆಟಿ ಸಂಭ್ರಮ ಹಾಗೂ ಅಜ್ಜಿಯರ ಸಾಂಪ್ರದಾಯಿಕ ಆಹಾರೋತ್ಸವ ಕಾರ್ಯಕ್ರಮ

ಅಂಜಲಿ ಮಾಂಟೆಸ್ಸೋರಿ ಶಾಲೆಯಲ್ಲಿ ಆಟಿ ಸಂಭ್ರಮ ಹಾಗೂ ಅಜ್ಜಿಯರ ಸಾಂಪ್ರದಾಯಿಕ ಆಹಾರೋತ್ಸವ ಕಾರ್ಯಕ್ರಮವನ್ನು‌ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಲೆಯ ಅಜ್ಜಿಯರಾದ ಜಯಶ್ರೀ ರಾಮಚಂದ್ರ ಹಾಗೂ ಶ
ಸವಿತಾ ಅವರು ಆಗಮಿಸಿ ಚೆನ್ನೆಮನೆ ಆಟವಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪುಟಾಣಿ ಚಿನ್ಮಯಿ ಅವರು ಪ್ರಾರ್ಥನೆ ನೆರವೇರಿಸಿದರು. ಶಾಲೆಯ ಕರಸ್ಪಾಂಡೆಂಟ್ ಗೀತಾಂಜಲಿ ಟಿ. ಜಿ. ಅವರು ಪರಿಚಯಾತ್ಮಕ ಭಾಷಣ ಮಾಡುತ್ತಾ “Sharing is Caring” ಎಂಬ ಸಂದೇಶವನ್ನು ನೀಡಿದರು. ಒಟ್ಟಾಗಿ ಹಂಚಿಕೊಂಡು ತಿನ್ನುವ ಸಂಸ್ಕಾರವು ಮಕ್ಕಳಲ್ಲಿ ಪ್ರೀತಿ, ಸಹಕಾರ ಮತ್ತು ಕಾಳಜಿಯ ಗುಣಗಳನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಶಾಲೆಯ ಅಜ್ಜ–ಅಜ್ಜಿಯರು ಪ್ರೀತಿಯಿಂದ ತಯಾರಿಸಿದ ವಿಶೇಷ ಆಟಿ ತಿಂಡಿಗಳನ್ನು ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವ “Eating Together” ಪರಿಕಲ್ಪನೆಯನ್ನು ಅನುಭವಿಸಿದರು.
ಈ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಆಟಿ ತಿಂಗಳ ಮಹತ್ವ, ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಹಾರ ಪದ್ಧತಿಯ ಪರಿಚಯ ಮಾಡಿಕೊಡಲಾಯಿತು.
ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಫಬಿದಾ ಅವರು ಅತಿಥಿಗಳನ್ನು ಸ್ವಾಗತಿಸಿ ಸ್ವಾಗತ ಭಾಷಣ ಮಾಡಿದರು. ಸಂಗೀತಾ ಅವರು ವಂದನಾರ್ಪಣೆ ಸಲ್ಲಿಸಿದರು.
ಪೋಷಕರು, ಅಜ್ಜ–ಅಜ್ಜಿಯರು, ಶಿಕ್ಷಕರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಆಟಿ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಹಂಚಿಕೊಳ್ಳುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.



















Leave a Comment

Your email address will not be published. Required fields are marked *

error: Content is protected !!
Scroll to Top