ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರದಲ್ಲಿ ಆಗಸ್ಟ್ 2ರಂದು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭಗೊoಡಿದ್ದು ಆ.9ರಂದು ಎರಡನೇ ವಾರ ತರಗತಿ ನಡೆಯಿತು.
ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಜೀಯವರು ತರಗತಿ ನಡೆಸಿ ಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಎ.ಎಸ್.ಐ ಕುಶಾಲಪ್ಪಗೌಡ,ಆಶ್ರಮದ ಟ್ರಸ್ಟಿ ಪ್ರಣವಿ,,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರತೀ ಭಾನುವಾರ ಬೆಳಿಗ್ಗೆ ಗಂಟೆ 10ರಿಂದ 11ರ ತನಕ ತರಗತಿ ನಡೆಯಲಿದೆ.
ಜಪ, ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಲು ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕೆ ಜಾತಿ, ಮತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ತರಗತಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.
ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಎರಡನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ













