ಜ್ಞಾನದೀಪ ಗೌರವ ಶಿಕ್ಷಕರನ್ನು ನೀಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದನೆ ಮಾಡಿರುವುದು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದಂತಾಗಿದೆ : ವೈ.ಎಸ್.ಹರಗಿ

ಶಿಕ್ಷಕರ ಕೊರೆತೆಗೆ ಜ್ಞಾನದೀಪ ಗೌರವ ಶಿಕ್ಷಕರನ್ನು ನೀಡುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದನೆ ಮಾಡಿರುವುದು ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡಿದಂತಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ ಹೇಳಿದರು.
ಸುಳ್ಯತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಇಲ್ಲಿಯ ಸಭಾಭವನದಲ್ಲಿ ಆ.11ರಂದು ಜ್ಞಾನದೀಪ ಗೌರವ ಶಿಕ್ಷಕರ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ 138 ಪ್ರಾಥಮಿಕ ಶಾಲೆಗಳಲ್ಲಿ 225 ಶಿಕ್ಷಕರ ಕೊರತೆ ಇದೆ. 15 ಮಂದಿ ಶಿಕ್ಷಕರು ಈಗಾಲೇ ನಿವ್ರತ್ತಿ ಹೊಂದಿದ್ದಾರೆ.ಇಂತಹ ಸಂಕಷ್ಟದಲ್ಲಿ ಗೌರವ ಶಿಕ್ಷಕರನ್ನು ನೀಡಿರುವುದು ದೊಡ್ಡ ಮಟ್ಟಿನ ಸಹಕಾರವಾಗಿದೆ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಡವರ ಮಕ್ಕಳು ಮಾತ್ರ ಸರಕಾರಿ ಶಾಲೆಗಳಲ್ಲಿ ಓದುತ್ತಿದ್ದು. ಅವರಿಗಾಗಿ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕರನ್ನು ಒದಗಿಸುವ ಮೂಲಕ ಅಳಿಲು ಸೇವೆಯನ್ನು ಮಾಡಲಾಗುತ್ತಿದೆ ಎಂದರು.
ಇನ್ಬೋರ್ವ ಮುಖ್ಯ ಅತಿಥಿ ಸುಳ್ಯ ವ್ರತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಸಮಾಜಮುಖಿ ಕಾರ್ಯ ಶ್ರೇಷ್ಠವಾದುದು ಎಂದು ಹೇಳಿದರು.
ದ.ಕ ಜಿಲ್ಲಾ ಜನಜಾಗೃತಿ ವೇದಿಕೆ ಪೂರ್ವಾಧ್ಯಕ್ಷರಾದ ಎನ್.ಎ.ರಾಮಚಂದ್ರ ರವರು ಅಧ್ಯಕ್ಷತೆ ವಹಿಸಿದ್ದರು.
,ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಹಿರಿಯ ಉದ್ಯಮಿ ಅಶೋಕಪ್ರಭು ಸುಳ್ಯ,



















ಜನಜಾಗೃತಿ ವೇದಿಕೆ ನಿಕಟ ಪೂರ್ವಾಧ್ಯಕ್ಷರಾದ ಭವಾನಿ ಶಂಕರ ಅಡ್ತಲೆ, ಮಹೇಶ್ ಕುಮಾ‌ರ್ ರೈ ಮೇನಾಲ, ಸದಸ್ಯರಾದ ಬೂಡು ರಾಧಾಕೃಷ್ಣ ರೈ, ಪದ್ಮನಾಭ ಶೆಟ್ಡಿ ವಲಯ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ, ಭಾಸ್ಕರ ಅಡ್ಕಾರ್ , ಭಜನಾ ಪರಿಷತ್ ಸುಳ್ಯ ವಲಯದ ಅಧ್ಯಕ್ಷೆ ಸವಿತಾ ಸಂದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿಕಟಪೂರ್ವ ಅಧ್ಯಕ್ಷ ಲೋಕನಾಥ ಅಮಚೂರು,ಶಿಕ್ಷಕರು ಇತರರು ಉಪಸ್ಥಿತರಿದ್ದರು
ಯೋಜನಾಧಿಕಾರಿ ಮಾಧವ ಗೌಡ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.ಸಿಬ್ಬಂದಿ ಪುಷ್ಪಲತಾ ವಂದಿಸಿದರು.ದಿವ್ಯ ಕಾರ್ಯಕ್ರಮ ನಿರೂಪಿಸಿದರು.

ತಾಲೂಕಿನ ಸ.ಹಿ.ಪ್ರಾ.ಶಾಲೆ ಅಜ್ಜಾವರ,ಸ.ಉ.ಹಿ.ಪ್ರಾ.ಶಾಲೆ ಮಂಡೆಕೋಲು, ವಿವೇಕಾನಂದ ಅ.ಹಿ.ಪ್ರಾ.ಶಾಲೆ ಅಡ್ಯಾ‌ರ್ ಜಾಲ್ಲೂರು, ಸ.ಹಿ.ಪ್ರಾ.ಶಾಲೆ ಕೊಯಿಕುಳಿ ದುಗಲಡ್ಕ, ಸ.ಹಿ.ಪ್ರಾ.ಶಾಲೆ ಎಡಮಂಗಲ, ಸ.ಹಿ.ಪ್ರಾ.ಶಾಲೆ ಮುರುಳ್ಯ, ಸ.ಹಿ.ಪ್ರಾ.ಶಾಲೆ ಏನೆಕಲ್ಲುಸ.ಹಿ.ಪ್ರಾ.ಶಾಲೆ ಪಾಂಡಿಗದ್ದೆ ಪಂಜ, ಸ.ಹಿ.ಪ್ರಾ.ಶಾಲೆ ದರ್ಖಾಸ್ತು ಬೆಳ್ಳಾರೆ, ಶಾರದಾ ಅ. ಹಿ.ಪ್ರಾ.ಶಾಲೆ ಗೂನಡ್ಕ, ಜ್ಯೋತಿ ಪ್ರೌಢಶಾಲೆ ಪೆರಾಜೆ, ಸ.ಹಿ.ಪ್ರಾ.ಶಾಲೆ ನಾಗತೀರ್ಥ ಸೇರಿದಂತೆ 12 ಶಾಲೆಗಳಿಗೆ ಜ್ಞಾನ ದೀಪ ಗೌರವ ಶಿಕ್ಷಕರನ್ನು ಕ್ಷೇತ್ರದ ವತಿಯಿಂದ ಆಯ್ಕೆ ಮಾಡಿ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

Leave a Comment

Your email address will not be published. Required fields are marked *

error: Content is protected !!
Scroll to Top