ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ)ಸುಳ್ಯ ಇದರ ವತಿಯಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟು ಕು.ಭಾನವಿಯವರಿಗೆ ಸನ್ಮಾನ

ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ)ಸುಳ್ಯ ಇದರ ವತಿಯಿಂದ ಕರ್ನಾಟಕ ಆತ್ಲೆಟಿಕ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಕ೦ಠೀರವ ಕ್ರೀಡಾಂಗಣ ಬೆಂಗಳೂರು ಇಲ್ಲಿ ನಡೆದ ರಾಜ್ಯ ಜೂನಿಯರ್ ಆತ್ಲೆಟಿಕ್ ಕ್ರೀಡಾಕೂಟ’ 2026 ರ 18 ರ ವಯೋಮಿತಿಯ ಬಾಲಕಿಯರ ಕ್ರೀಡಾಕೂಟದಲ್ಲಿ400 ಮೀ ಓಟದಲ್ಲಿ ನೂತನ ರಾಜ್ಯ ದಾಖಲೆಯೊಂದಿಗೆ ಚಿನ್ನದ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಅಮರ ಮೂಡ್ನುರು ಗ್ರಾಮದ ಕುಕ್ಕುಜಡ್ಕ . ಶ್ರೀ ಸುರೇಶ ಮತ್ತು ಶ್ರೀಮತಿ ಅನಿತಾ ದಂಪತಿಗಳ ಪುತ್ರಿ ಕು. ಭಾನವಿ. ಪಿ. ಯಸ್. ಇವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಜಯಲಕ್ಷೀ ಉರುಂಬಿ, ರೇವತಿ ಮದುವೆ ಗದ್ದೆ ಮತ್ತು ಶಿಕ್ಷಕಿ ಉಷಾಲತಾ ಪಡ್ಪು ಇವರು ಕು, ಭಾನವಿ ಇವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಆಡಳಿತ ಮಂಡಳಿ, ಅನುಷ್ಠಾನ ಸಮಿತಿ ಮತ್ತು ಗ್ರಾಮ ಸಂಚಾಲನ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

























Leave a Comment

Your email address will not be published. Required fields are marked *

error: Content is protected !!
Scroll to Top