ಚೆನ್ನಮಣೆ ಆಟದ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ ನಡೆಯಲು ಪೋತ್ಸಾಹ ಸಿಗಲಿ : ಚಿನ್ನಪ್ಪ ಗೌಡ

ನಾವು ಸಿ‌.ಸಿ.ಆರ್.ಟಿ.ಯ ಮೂಲಕ ಕಳೆದ ಅನೇಕ ವರ್ಷಗಳಿಂದ ಅಳಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಯಾದ ಚೆನ್ನಮಣೆಯ ಆಟವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದು ಈ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲು ಇನ್ನಷ್ಟು ಪೋತ್ಸಾಹದ ಅಗತ್ಯ ಇದೆ ಎಂದು ಸುಳ್ಯ ತಾಲೂಕು ಸಿ.ಸಿ.ಆರ್.ಟಿ ಸ್ಥಾಪಕಾಧ್ಯಕ್ಷ ಚಿನ್ನಪ್ಪ ಗೌಡ ಹೇಳಿದರು.
ಆ.22ರಂದು ಸಿ.ಸಿ.ಆರ್.ಟಿ ಸುಳ್ಯ ಇದರ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇವರ ಸಹಕಾರದಲ್ಲಿ ದೇವಚಳ್ಳ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಚೆನ್ನಮಣೆ ಸ್ಪರ್ಧೆ-2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚೆನ್ನಮಣೆ ಆಟ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತವಾಗಿದ್ದು, ಈ ಸಾಂಪ್ರದಾಯಿಕ ಒಳಾಂಗಣ ಆಟವನ್ನು ನಾವು ಉಳಿಸಿ ಬೆಳೆಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಉದಕುಮಾರ್ . ಸರಕಾರಿ ಪ್ರೌಢಶಾಲೆ ಎಲಿಮಲೆಯ ಮುಖ್ಯ ಶಿಕ್ಷಕಿ ಸಂಧ್ಯಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.ಸಿ.ಸಿ.ಆರ್.ಟಿ ಕಾರ್ಯದರ್ಶಿ ಪೂರ್ಣಿಮಾ,ಸದಸ್ಯ ಮೋಹನ್ ಎಣ್ಮೂರು
ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ದಿವ್ಯ,ಸದಸ್ಯರು ಶಿಕ್ಷಕಿಯರು,ಶಿಕ್ಷಕರು,ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.
ಸಿ.ಸಿ.ಆರ್.ಟಿ ಅಧ್ಯಕ್ಷ ಮುರಳಿಧರ ಪುನುಗುಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಚಳ್ಳ ಶಾಲೆಯ ಮುಖ್ಯ ಶಿಕ್ಷಕ ಕುಶಾಲಪ್ಪ ಗೌಡ ತಂಬತ್ತಾಜೆ ವಂದಿಸಿದರು.ಶಿಕ್ಷಕ ಜೀವನ್ ತಳೂರು ಕಾರ್ಯಕ್ರಮ ನಿರೂಪಿಸಿದರು‌.

























ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ – 2026
ಫಲಿತಾಂಶ
ಆಯೋಜನೆ: CCRT ಬಳಗ ಸುಳ್ಯ
ದಿನಾಂಕ: 22-08-2026
ಸ್ಥಳ: ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ, ದೇವಚಳ್ಳ
🏆 ಪ್ರಾಥಮಿಕ ಶಾಲಾ ವಿಭಾಗ
🥇 ಹಸು ಕರು ಆಟ
ಪ್ರಥಮ: ಲವೀಶ್ ಡಿ.ಜಿ. – ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ, ಮುಡ್ನೂರು–ಮರ್ಕಂಜ
ದ್ವಿತೀಯ: ಗಮ್ಯ ಡಿ.ವಿ. – ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ತೊಡಿಕಾನ
ತೃತೀಯ: ಕಿಶನ್ ಚಂದ್ರ ಕೆ.ಬಿ. – PMShri KPS, ಗುತ್ತಿಗಾರು
🥇 ಮೂಲೆ ಆಟ
ಪ್ರಥಮ: ನಂದನ್ ಡಿ. – ಸ.ಉ.ಹಿ.ಪ್ರಾ. ಶಾಲೆ, ಮುರುಳ್ಯ–ಅಲೆಕ್ಕಾಡಿ
ದ್ವಿತೀಯ: ತುಷಿತಾ ಕೆ.ಎನ್. – ಸ.ಹಿ.ಪ್ರಾ. ಶಾಲೆ, ತೊಡಿಕಾನ
ತೃತೀಯ: ವೀಕ್ಷಾ ಕೆ.ಸಿ. – ಸ.ಹಿ.ಪ್ರಾ. ಶಾಲೆ, ಮಡಪ್ಪಾಡಿ
🥇 ಅರಸು ಒಕ್ಕಲು ಆಟ
ಪ್ರಥಮ: ಶರಣ್ಯ ಸಿ. – ಸ.ಹಿ.ಪ್ರಾ. ಶಾಲೆ, ಮಡಪ್ಪಾಡಿ
ದ್ವಿತೀಯ: ಅಶ್ವಿನ್ ಎ. – ಜ್ಞಾನ ದೀಪ, ಎಲಿಮಲೆ
ತೃತೀಯ: ನೂತನ್ ಕುಮಾರ್ – ದ.ಕ.ಜಿ.ಪ. ಹಿ.ಶಾಲೆ, ವಳಲಂಬೆ
🏆 ಪ್ರೌಢಶಾಲಾ ವಿಭಾಗ
🥇 ಹಸು ಕರು ಆಟ
ಪ್ರಥಮ: ಶಮ್ಯ ಬಿ. – GPUC, ಸುಳ್ಯ
ದ್ವಿತೀಯ: ಯಕ್ಷಿತ್ ಎಸ್. – ಜ್ಞಾನ ದೀಪ, ಎಲಿಮಲೆ
ತೃತೀಯ: ಮಾನ್ವಿ ಕೆ.ಎಸ್. – KPS, ಬೆಳ್ಳಾರೆ
🥇 ಮೂಲೆ ಆಟ
ಪ್ರಥಮ: ಯನ್ವಿತ್ ಕೆ. – PMShri KPS, ಗುತ್ತಿಗಾರು
ದ್ವಿತೀಯ: ಪೂರ್ವಜ್ – GHS, ಎಣ್ಮೂರು
ತೃತೀಯ: ಪೃಥ್ವಿ ಎಂ. – GHS, ದುಗ್ಗಲಡ್ಕ
🥇 ಅರಸು ಒಕ್ಕಲು ಆಟ
ಪ್ರಥಮ: ವಿದ್ಯಾಶ್ರೀ ಎಂ. – GPUC, ಸುಳ್ಯ
ದ್ವಿತೀಯ: ಮೋನಿಶ್ – KPS, ಗಾಂಧೀನಗರ
ತೃತೀಯ: ರೇಶ್ಮಾ ಎ. – GHS, ಮರ್ಕಂಜ

Leave a Comment

Your email address will not be published. Required fields are marked *

error: Content is protected !!
Scroll to Top