ಕೆ.ಎನ್.ಎಸ್.ಎಸ್. ಸುಳ್ಯ ಕರಯೋಗಂ ವತಿಯಿಂದ ಓಣಂ ಆಚರಣೆ

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ವತಿಯಿಂದ ಕುಟುಂಬ ಸಮ್ಮಿಲನ ಮತ್ತು ಓಣಂ ಆಚರಣೆಯು ಸೆ. 6 ರಂಸು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಿತು.

































ಸುಳ್ಯಂ ಕರಯೋಗಂ ಅಧ್ಯಕ್ಷ ಕೃಷ್ಣನ್ ನಾಯರ್ ಕನಕರಂಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎನ್.ಎಸ್. ಎಸ್. ಹೊಸದುರ್ಗ ಕರಯೋಗಂ ಉಪಾಧ್ಯಕ್ಷ ಕೋಡೋತ್ ಶ್ರೀಕುಮಾರ್ ನಾಯರ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕೆ.ಎನ್.ಎಸ್.ಎಸ್. ಮಂಗಳೂರು ಕರಯೋಗಂ ಅಧ್ಯಕ್ಷ ಮುರಳಿ ಹೊಸಮಜಲು, ಸುಳ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಡಾ.‌ರಾಮ್ ಮೋಹನ್ ಭಾಗವಹಿಸಿದ್ದರು.

ಕೆ.ಎನ್.ಎಸ್.ಎಸ್. ಕೇಂದ್ರ ಸಮಿತಿಯ ಕಾರ್ಯದರ್ಶಿ ಟಿ.ವಿ.ನಾರಾಯಣನ್ ಮತ್ತು ಉಪಾಧ್ಯಕ್ಷ ಮೋಹನ್ ಕುಮಾರ್ ಆಗಮಿಸಿ ಶುಭ ಹಾರೈಸಿದರು.

ಕರಯೋಗಂ ಸದಸ್ಯರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿರುವ ಭಾಸ್ಕರನ್ ನಾಯರ್ ಮಧುವನ ( ಕೃಷಿ ), ಜನಾರ್ಧನನ್ ನಾಯರ್ ಅರಂತೋಡು ( ಮಿಲಿಟರಿ ಸೇವೆ ), ಬಾಲಕೃಷ್ಣನ್ ನಾಯರ್ ಎಸ್.ಬಿ.ಲ್ಯಾಬ್ ( ವಾಣಿಜ್ಯೋದ್ಯಮ ), ಶಕುಂತಲಾ ಕೃಷ್ಣನ್ ಕುತ್ತಮೊಟ್ಟೆ ( ವೃತ್ತಿ ಸೇವೆ ), ರಮೇಶ್ ನಂಬಿಯಾರ್ ಚೆಂಬು ( ಸಮಾಜ ಸೇವೆ ) ಅವರಿಗೆ ಸನ್ಮಾನ ನಡೆಯಿತು. ಕೆ.ಎನ್.ಎಸ್.ಎಸ್. ಸುಳ್ಯ ಕರಯೋಗಂ ಉಪಾಧ್ಯಕ್ಷ ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದನಾ ಭಾಷಣ ಮಾಡಿದರು.

ಸಿಂಧೂರಂ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಡಿ. ಪ್ರಸಾದ್, ಕಾರ್ಯದರ್ಶಿ ಪ್ರತಿಭಾ ದುರ್ಗಾಕುಮಾರ್ ಉಪಸ್ಥಿತರಿದ್ದರು.

ಅಗಲಿದ ಸಮುದಾಯ ಸದಸ್ಯರಿಗೆ ಶ್ರದ್ಧಾಂಜಲಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಪ್ರತಿಭಾವಂತ ಮಕ್ಕಳಿಗೆ ದತ್ತಿ ನಿಧಿ ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ಶ್ರೀಕಲಾ ಬಾಲಕೃಷ್ಣನ್ ಬಹುಮಾನಿತರ ಪಟ್ಟಿ ವಾಚಿಸಿದರು

ಕು. ಶ್ರೀಲಯ ಮಧುವನ ಪ್ರಾರ್ಥಿಸಿದರು.‌ ಸಿಂಧೂರಂ ಮಹಿಳಾ ಘಟಕದವರು ಆಚಾರ್ಯ ಸ್ಮರಣೆ ನೆರವೇರಿಸಿದರು. ಕರಯೋಗಂ ಕೋಶಾಧಿಕಾರಿ ಪ್ರಭಾಕರನ್ ನಾಯರ್ ಸ್ವಾಗತ್ ಸ್ವಾಗತಿಸಿದರು. ಕಾರ್ಯದರ್ಶಿ ಶಶಿಧರನ್ ನಾಯರ್ ವರದಿ ವಾಚಿಸಿದರು. ವಿಶ್ವನಾಥನ್ ನಾಯರ್ ವಂದಿಸಿದರು. ಶೈಲಜಾ ಜಯರಾಜ್, ಅರುಣಾ ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ತಿರುವಾದಿರ, ನೃತ್ಯ, ಹಾಡು ಸಹಿತವಾದ ಸಾಂಸ್ಕೃತಿಕ ಸಂಭ್ರಮ‌ ನಡೆಯಿತು. ಹಬ್ಬದ ವಿಶೇಷವಾದ ಓಣಂ ಸದ್ಯ ನಡೆಯಿತು.

Leave a Comment

Your email address will not be published. Required fields are marked *

error: Content is protected !!
Scroll to Top