ಮಾಧ್ಯಮ ಅಕಾಡೆಮಿ ತರಬೇತಿಗೆ ‘ಸುದ್ದಿ ಬಿಡುಗಡೆ’ ಪತ್ರಕರ್ತೆಯರ ಆಯ್ಕೆ

ಸುಳ್ಯ: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್ ಉಪಕ್ರಮದಡಿ ಮೈಸೂರಿನಲ್ಲಿ ಸೆ. 27ರಿಂದ 30ರವರೆಗೆ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ಸುಳ್ಯದ ಸುದ್ದಿ ಬಿಡುಗಡೆ ವಾರಪತ್ರಿಕೆಯ ಪತ್ರಕರ್ತೆಯರಾದ ಜಯಶ್ರೀ ಕೊಯಿಂಗೋಡಿ ಹಾಗೂ ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಆಯ್ಕೆಯಾಗಿದ್ದಾರೆ.
ಜಯಶ್ರೀ ಕೊಯಿಂಗೋಡಿ ಹಾಗೂ ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಅವರು ಹಲವು ವರ್ಷಗಳಿಂದ ಸುದ್ದಿ ಬಿಡುಗಡೆ ವಾರಪತ್ರಿಕೆಯಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಜಯಶ್ರೀ ಕೊಯಿಂಗೋಡಿ ಅವರು ಸುಳ್ಯ ಕಸಬಾ ಕೊಯಿಂಗೋಡಿಯ ಶಿವಕುಮಾರ್ ಕೊಯಿಂಗೋಡಿ ಅವರ ಪತ್ನಿಯಾಗಿದ್ದಾರೆ. ಪ್ರಜ್ಞಾ ಎಸ್. ನಾರಾಯಣ್ ಅಚ್ರಪ್ಪಾಡಿ ಅವರು ಐವರ್ನಾಡು ಗ್ರಾಮದ ಕೋಡ್ತಿಲು–ಅಚ್ರಪ್ಪಾಡಿಯ ಸತ್ಯನಾರಾಯಣ ಅಚ್ರಪ್ಪಾಡಿ ಅವರ ಪತ್ನಿಯಾಗಿದ್ದು, ಅವರು ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದಾರೆ.
ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಇಬ್ಬರು ಪತ್ರಕರ್ತೆಯರಿಗೆ ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.











































Leave a Comment

Your email address will not be published. Required fields are marked *

error: Content is protected !!
Scroll to Top