ಆಲೆಟ್ಟಿ: ಹೃದಯಾಘಾತದಿಂದ ನಾಗರಾಜ ಭಟ್ ನಿಧನ

ಸುಳ್ಯ, ಅ.2: ಆಲೆಟ್ಟಿ ಗ್ರಾಮದ ಬಿಸಿಲುಮಲೆ ನಿವಾಸಿ, ಬಲೆಕ್ಕಳ ಮನೆತನದ ದಿ. ಗೋಪಾಲ ಭಟ್ ಅವರ ಹಿರಿಯ ಪುತ್ರ, ಪ್ರಗತಿಪರ ಕೃಷಿಕ ನಾಗರಾಜ ಭಟ್ (74) ಅವರು ಹೃದಯಾಘಾತದಿಂದ ನಿಧನರಾದರು.
ಅ.2ರಂದು ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್. ಕಾಂಪ್ಲೆಕ್ಸ್‌ನಲ್ಲಿರುವ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಕಚೇರಿಗೆ ನಾಗರಾಜ ಭಟ್ ಆಗಮಿಸಿದ್ದರು. ಕಚೇರಿಯಲ್ಲಿ ಕುಳಿತಿದ್ದ ವೇಳೆ ಅವರಿಗೆ ದಿಢೀರ್ ಅಸ್ವಸ್ಥತೆ ಕಾಣಿಸಿಕೊಂಡಿತು.
ತಕ್ಷಣ ಗಮನಿಸಿದ ಚಾರ್ಟರ್ ಅಕೌಂಟೆಟ್ ನಾಗರಾಜ ಭಟ್ ಅವರಿಗೆ ನೆರವಾಗಿ ತಮ್ಮ ಕಾರಿನಲ್ಲಿ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಮೃತರು ಪತ್ನಿ ಯಶೋಧ, ಪುತ್ರರಾದ ಚಿತ್ರ ನಿರ್ದೇಶಕ ಅವಿನಾಶ್ ಬಲೆಕ್ಕಳ ಹಾಗೂ ನಚಿಕೇತ್ ಬಲೆಕ್ಕಳ, ಪುತ್ರಿ ನಿವೇದಿತಾ, ಸಹೋದರರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಕುಮಾರಸ್ವಾಮಿ ಭಟ್ ಬಿಸಿಲುಮಲೆ, ವಿಶಾಲ್ ಹಾಸ್ಟೆಲ್‌ನ ಮಾಲಕ ಸುಬ್ರಹ್ಮಣ್ಯ ಭಟ್ ಬಿಸಿಲುಮಲೆ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ನಾಗರಾಜ ಭಟ್ ಅವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪ್ರಗತಿಪರ ಕೃಷಿಕರಾಗಿದ್ದರು.









































































Leave a Comment

Your email address will not be published. Required fields are marked *

error: Content is protected !!
Scroll to Top