ಸುಳ್ಯ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಪಿ.ಎಸ್. ಗಂಗಾಧರ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸಮಿತಿಯ ಅಧ್ಯಕ್ಷರಾಗಿದ್ದ ಶಾಹುಲ್ ಹಮೀದ್ ಕುತ್ತಮೊಟ್ಟೆ ಅವರ ನೇತೃತ್ವದ ಸಮಿತಿಯ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದೆ.
ನೂತನ ಸಮಿತಿಯ ಸದಸ್ಯರಾಗಿ ಜೂಲಿಯಾನ ಕ್ರಾಸ್ತಾ (ಬೀರಮಂಗಲ), ಸನತ್ ಮುಳುಗಾಡು (ಗುತ್ತಿಗಾರು), ಶಶಿಕಲಾ ದೇರಪ್ಪಜ್ಜನಮನೆ (ಗುತ್ತಿಗಾರು), ಉಮರ್ ಶಾಫಿ (ಶಾಫಿ ಕುತ್ತಮೊಟ್ಟೆ), ಸುರೇಶ್ ಎಂ.ಎಚ್., ಪ್ರಮೋದ್ ಬೊಳ್ಳಾಜೆ, ತಿರುಮಲೇಶ್ವರಿ ಅಡ್ಕಾರು, ಮುತ್ತಪ್ಪ ಪೂಜಾರಿ (ಆಲೆಟ್ಟಿ), ಗಣೇಶ್ ನಾಗಪಟ್ಟಣ, ಮುಹಮ್ಮದ್ ಮುಸ್ತಫಾ (ಬೆಳ್ಳಾರೆ), ಕುಸುಮಾಧರ (ಐವತ್ತೊಕ್ಲು), ಪ್ರಶಾಂತ್ ರೈ (ಮರುವಂಜ), ಜಮ್‌ಶೀರ್ ಶಾಲೆಕರ್ (ಮಂಡೆಕೋಲು) ಹಾಗೂ ಸಂಧ್ಯಾ ದೋಳ (ಮರ್ಕಂಜ) ಅವರನ್ನು ನೇಮಕ ಮಾಡಲಾಗಿದೆ.
ನೂತನ ಸಮಿತಿಯು ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಪ್ರಗತಿ ಪರಿಶೀಲನೆ ಹಾಗೂ ಅರ್ಹ ಫಲಾನುಭವಿಗಳಿಗೆ ಯೋಜನೆಗಳ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ.
ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಪಿ.ಎಸ್. ಗಂಗಾಧರ್ ನೇಮಕ











