ರಂಗ ಮಯೂರಿ ಕಲಾ ಶಾಲೆ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿರುವ ಮಕ್ಕಳ ಹಬ್ಬವು ಸುಳ್ಯದ ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಅ.9 ರಂದು ಆರಂಭಗೊಂಡಿತು.
ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸುದ್ದಿ ಮಾಧ್ಯಮ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ರವರು ವಹಿಸಿದ್ದರು.
‘ಗ್ರೀನ್ ಹೀರೋ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಗಿಡಕ್ಕೆ ಮಣ್ಣು ಮತ್ತು ನೀರೆರೆದು ಸಂಕಲ್ಪ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ‘ಬಿ’, ಅಧ್ಯಕ್ಷ ಡಾ. ರೇಣುಕಾ ಪ್ರಸಾದ್ ಕೆ.ವಿ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮುಸ್ತಾಫ ಕೆ.ಎಂ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ಸಂತ ಬ್ರಿಜಿಡ್ ಚರ್ಚ್ ಉದರ ಧರ್ಮಗುರುಗಳಾದ
ಫಾ. ಒಲ್ವಿನ್ ಡಿ ಕುನ್ಹ,ಹಿರಿಯ ಉದ್ಯಮಿ ಕೃಷ್ಣ ಕಾಮತ್, ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಎಸ್ ಹರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿ ಶ್ರೀಮತಿ ಶೈಲಜಾ, ವಿದ್ಯಾರ್ಥಿ ನಾಯಕ ಶುಶಾಂಕ್ ಕೆ.ಜೆ, ವಿದ್ಯಾರ್ಥಿ ನಾಯಕಿ ಪ್ರಾಪ್ತಿ ಆಲಂಕಲ್ಯ ಉಪಸ್ಥಿತರಿದ್ದರು.
ಪ್ರಣವ ಸೌಹಾರ್ದ ಸಹಕಾರಿ ಸಂಘ ನಿ. ಅಧ್ಯಕ್ಷ ಜಿ.ಆರ್. ಪ್ರಸಾದ್ ಸ್ವಾಗತಿಸಿ, ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ಪ್ರಾಸ್ತವಿಕ ಮಾತನಾಡಿದರು.
ಶಶಿಕಾಂತ್ ಮಿತ್ತೂರು ಮತ್ತು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂಕಲ್ಪ ಮಕ್ಕಳ ಹಬ್ಬ–2026’ರ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ವಿಚಾರಗೋಷ್ಠಿ ಹಾಗೂ ಕಾರ್ಯಗಾರ ನಡೆಯಲಿದೆ. ಅ.9ರಂದು ಬೆಳಿಗ್ಗೆ 11.45ರಿಂದ 12.45ರವರೆಗೆ ಪರಿಸರ ಜಾಗೃತಿ ಮತ್ತು ನಿರ್ವಹಣೆಯ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಪರಿಸರ ತಜ್ಞರಾದ ಭಜನ್ ಬೋಪಣ್ಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಚಂದ್ರಶೇಖರ ಪೇರಾಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಪರಾಹ್ನ 1 ರಿಂದ 1.45ರವರೆಗೆ
‘ಮಕ್ಕಳ ಸಾಮಾಜಿಕ ಜವಾಬ್ದಾರಿ ಹಾಗೂ ಮಾಧ್ಯಮಗಳ ಬಳಕೆ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಸುಳ್ಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ ಕುಕ್ಕುಜಡ್ಕ ವಿಚಾರ ಮಂಡಿಸಲಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜು ಸುಳ್ಯದ ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 4.30ರಿಂದ 6.00ರವರೆಗೆ ಪೋಷಕರಿಗಾಗಿ ವಿನೂತನ ಕಾರ್ಯಗಾರ ‘ಮಾತೃ ಸಂಗಮ ಮಾಲಿಕೆ’ಯಡಿ ‘ವ್ಯಸ್ಥ ಜೀವನ–ಸ್ವಸ್ಥ ಭೋಜನ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿಆರೋಗ್ಯಕರ ಆಹಾರ ಹಾಗೂ ತಿಂಡಿಗಳ ತಯಾರಿ ಬಗ್ಗೆ ಕಾರ್ಯಾಗಾರ ಮತ್ತು ಪ್ರಾತ್ಯಕ್ಷಿಕೆ ನಡೆಯಲಿದ್ದು, ಸಾವಯವ ಕೃಷಿಕ ಗ್ರಾಹಕ ಬಳಗ (ರಿ.) ಮಂಗಳೂರು ಪ್ರಸ್ತುತ ಪಡಿಸಲಿದೆ. ಕೇಶವಕೃಪಾದ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಅ.10 ರಂದು ಬೆಳಿಗ್ಗೆ 10.45ರಿಂದ 11.30ರವರೆಗೆ ‘ಸರಕಾರಿ ಆಡಳಿತ ಹುದ್ದೆಗಳ ಮಾಹಿತಿ: ಅಗತ್ಯತೆ ಮತ್ತು ಅವಶ್ಯಕತೆ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ವಿದ್ಯಾಮಾತಾ ಅಕಾಡೆಮಿ, ಪುತ್ತೂರಿನ ವ್ಯವಸ್ಥಾಪಕ ನಿರ್ದೇಶಕರಾದ ಭಾಗ್ಯೇಶ್ ರೈ ವಿಚಾರ ಮಂಡಿಸಲಿದ್ದು, ಲಯನ್ಸ್ ಕ್ಲಬ್ ಸುಳ್ಯದ ಅಧ್ಯಕ್ಷರಾದ ವಿನೋದ್ ಲಸ್ರಾದೋ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ 11.45ರಿಂದ 12.45ರವರೆಗೆ ‘ಮಕ್ಕಳ ಬೆಳವಣಿಗೆಯಲ್ಲಿ ಶಾಲೆ ಮತ್ತು ಮನೆಯ ವಾತಾವರಣ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಹಾಗೂ ಸಾಹಿತಿಗಳಾದ ಅರವಿಂದ ಚೊಕ್ಕಾಡಿ ವಿಚಾರ ಮಂಡಿಸಲಿದ್ದು, ಸುದ್ದಿ ಚಾನೆಲ್‌ನ ಮುಖ್ಯಸ್ಥ ದುರ್ಗಾಕುಮಾರ್ ನಾಯರ್‌ಕೆರೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 1ರಿಂದ 1.45ರವರೆಗೆ
‘ಮಕ್ಕಳ ಹಕ್ಕುಗಳು ಹಾಗೂ ಕಾನೂನು ಅರಿವು’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಹಿರಿಯ ನ್ಯಾಯವಾದಿ ವೆಂಕಪ್ಪ ಗೌಡ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಸುಳ್ಯ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್ ಅಧ್ಯಕ್ಷತೆ ವಹಿಸಲಿದ್ದಾರೆ
ಸಂಜೆ 4.00ರಿಂದ 5.30 ರವರೆಗೆ ಮಾತೃ ಸಂಗಮ ಮಾಲಿಕೆಯಲ್ಲಿ ‘ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಅಟೋಮೇಷನ್ ಕ್ಲೌಡ್ ಸೊಲ್ಯೂಷನ್ ಪ್ರೈ.ಲಿ. ಮಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ರಾಮ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಕೆ.ವಿ.ಜಿ. ಅಮರಜ್ಯೋತಿ ಪದವಿಪೂರ್ವ ಕಾಲೇಜು, ಸುಳ್ಯದ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 5.45ರಿಂದ 6.45ರವರೆಗೆ ವಿದ್ಯಾರ್ಥಿ ಚರ್ಚಾ ಗೋಷ್ಠಿ ನಡೆಯಲಿದ್ದು, ‘ಎ.ಐ. ತಂತ್ರಜ್ಞಾನ… ಸಮಾಜ ಮತ್ತು ಸಂಸ್ಕೃತಿಗೆ ಪೂರಕವೇ? ಅಥವಾ ಮಾರಕವೇ?’ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಚಂದ್ರಶೇಖರ ಪೇರಾಲ್ ಅವರು ಚರ್ಚಾ ಗೋಷ್ಠಿಯನ್ನು ನಿರ್ವಹಿಸಲಿದ್ದಾರೆ.
ಅ.11ರಂದು ಬೆಳಿಗ್ಗೆ 10.30ರಿಂದ 11.15ರವರೆಗೆ ಮಕ್ಕಳ ಮಾತೃಭಾಷಾ ಮಾಲಿಕೆಯಲ್ಲಿ ಅರೆಭಾಷೆ ಎಂಬ ವಿಷಯದ ಕುರಿತು ‘ಅರೆಭಾಷೆ ಕಲಿಕೆ ಮತ್ತು ಮಹತ್ವ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕೆ.ಆರ್. ಗಂಗಾಧರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷೆ ರೊ. ಲತಾ ಮಧುಸೂದನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬೆಳಿಗ್ಗೆ 11.30ರಿಂದ 12.30ರವರೆಗೆ ‘ಸಾಮಾಜಿಕ ಕಾಳಜಿ ಮತ್ತು ಸಾಂಸ್ಕೃತಿಕ ಶಿಕ್ಷಣದ ಮಹತ್ವ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ರಂಗನಿರ್ದೇಶಕ ಹಾಗೂ ಜೇಸಿಐ ರಾಷ್ಟ್ರೀಯ ತರಬೇತುದಾರ ಬಾಸುಮ ಕೊಡಗು ವಿಚಾರ ಮಂಡಿಸಲಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಜ್ಞಾನೇಶ್ ಎನ್.ಎ. ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 12.45ರಿಂದ 1.30ರವರೆಗೆ ಮಕ್ಕಳ ಮಾತೃಭಾಷಾ ಮಾಲಿಕೆಯಲ್ಲಿ ತುಳು ಎಂಬ ವಿಷಯದಲ್ಲಿ ನಡೆಯುವ ‘ತುಳು ಭಾಷಾ ಕಲಿಕೆ ಮತ್ತು ಮಹತ್ವ’ ವಿಚಾರಗೋಷ್ಠಿಯಲ್ಲಿ ಪುತ್ತೂರಿನ ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 2ರಿಂದ 3.30ರವರೆಗೆ ಪೋಷಕರಿಗಾಗಿ ‘ಮಕ್ಕಳ ಕೈಬರಹ ಮತ್ತು ವ್ಯಕ್ತಿತ್ವ’ ವಿಷಯದ ಕುರಿತು ನಡೆಯುವ ವಿಚಾರಗೋಷ್ಠಿಯಲ್ಲಿ ಹೆಸರಾಂತ ಬರಹ ತಜ್ಞ ಹಾಗೂ ಮನಶಾಸ್ತ್ರಜ್ಞರಾದ ಶಿವಾನಂದ ನಾಯಕ್ ರವರು ವಿಚಾರ ಮಂಡಿಸಲಿದ್ದು, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಉಜ್ವಲ್ ಊರುಬೈಲ್ ಅಧ್ಯಕ್ಷತೆ ವಹಿಸಲಿದ್ದಾರೆ.
————
*ಗುಂಪುಗಾಯನ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆ*
ಅ. 9ರಂದು ಬೆಳಿಗ್ಗೆ 9ರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗುಂಪು ಗಾಯನ ಸ್ಪರ್ಧೆ ನಡೆಯಲಿದೆ. ಅಪರಾಹ್ನ 2ರಿಂದ ಅರೆಭಾಷೆ ಹಾಡಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ಅ. 10ರಂದು ಬೆಳಿಗ್ಗೆ 9ರಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗುಂಪು ನೃತ್ಯ ಸ್ಪರ್ಧೆ ನಡೆಯಲಿದ್ದು, ಅಪರಾಹ್ನ 2ರಿಂದ ತುಳು ಹಾಡಿಗೆ ಗುಂಪು ನೃತ್ಯ ಸ್ಪರ್ಧೆ ನಡೆಯಲಿದೆ.
ಅ. 11ರಂದು ಪೂರ್ವಾಹ್ನ 9ರಿಂದ ಪದವಿಪೂರ್ವ ವಿದ್ಯಾರ್ಥಿಗಳ ಗುಂಪು ನೃತ್ಯ ಸ್ಪರ್ಧೆ ನಡೆಯಲಿದೆ.
————
*ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು*
ಸಂಕಲ್ಪ ಮಕ್ಕಳ ಹಬ್ಬದಲ್ಲಿ ಪ್ರತಿ ದಿನ ಸಂಜೆ ನಡೆಯುವ ಸಾಂಸ್ಕೃತಿಕ ಸಂಭ್ರಮದಲ್ಲಿ ರಂಗಮಯೂರಿ ಕಲಾಶಾಲೆ (ರಿ.) ಸುಳ್ಯ, ಗಾನ ನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯ, ಡಿ ಯುನೈಟೆಡ್ ಡಾನ್ಸ್ ಸ್ಟುಡಿಯೋ ಸುಳ್ಯ, XTASY ಡ್ಯಾನ್ಸ್ ಕ್ರೀವ್ ಸುಳ್ಯ, ಮಂಜು ಬ್ರದರ್ಸ್ ಸುಳ್ಯ, ನಟರಾಜ ನೃತ್ಯನಿಕೇತನ (ರಿ.) ಸುಳ್ಯ, ಪ್ಯೂಷನ್ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ಸುಳ್ಯ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಸುಳ್ಯ ತಂಡಗಳು ಭಾಗವಹಿಸಲಿವೆ. ಅ.11ರಂದು ಅಪರಾಹ್ನ 3.45ರಿಂದ ಕು. ಸುಪ್ರಜಾ ರಾವ್ ಪುತ್ತೂರು ಮತ್ತು ತಂಡದವರಿಂದ ವಯೋಲಿನ್ ವಾದನ ನಡೆಯಲಿದೆ.
————
*ವಿಶೇಷ ಆಕರ್ಷಣೆಗಳು*
ಮಕ್ಕಳ ಹಬ್ಬದಲ್ಲಿ ವಿಶೇಷ ಆಕರ್ಷಣೆಯಾಗಿ ಆರೋಗ್ಯಕರ ಆಹಾರ ಮೇಳ, ಸ್ಥಳದಲ್ಲೇ ಮಾವು, ಹಲಸು, ಅನನಾಸು ಹಣ್ಣಿನ ಹೋಳಿಗೆ ತಯಾರಿ, ಪಾರಂಪರಿಕ ವಸ್ತುಗಳ ಪ್ರಾತ್ಯಕ್ಷಿಕೆ ಮತ್ತು ಹಳೆ ನಾಣ್ಯಗಳ ಪ್ರದರ್ಶನ, ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ತುಳು ಮತ್ತು ಅರೆಭಾಷೆ ಸಾಹಿತ್ಯ ಸ್ಪರ್ಧೆಗಳು, ಆಧುನಿಕ ತಾರಾಲಯ, ಮಕ್ಕಳಿಗಾಗಿ ವರ್ಚುವಲ್ ರಿಯಾಲಿಟಿ ಗೇಮ್ಸ್, ಎ.ಐ. ರೋಬೋಟ್ ಪ್ರದರ್ಶನ, ಪರಿಸರ ಜಾಗೃತಿ ಕಾರ್ಯಕ್ರಮವಾಗಿ ಮನೆಗೊಂದು ಗಿಡ, ಮಾತೃ ಭಾಷ ಪ್ರೇಮ, ಆಧಾರ್ ನೋಂದಣಿ ಮತ್ತು ಹಣಕಾಸು ಮಾಹಿತಿ, ಪುಸ್ತಕ ಮೇಳ, ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳು ನಡೆಯಲಿದೆ.











