ಬ್ಯಾಂಕ್ ಆಫ್ ಬರೋಡ ಪ್ರಾಯೋಜಿತ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸದಸ್ಯರ 35ನೇ ವಾರ್ಷಿಕ ಮಹಾಸಭೆ ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ
ಅ. 28ರಂದು ನಡೆಯಿತು.
ಇದೇ ಸಂದರ್ಭ ಆರೋಗ್ಯ, ಕೃಷಿ, ಶಿಕ್ಷಣಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಸಾಧನೆ ಮಾಡಿದ ಜಾಲ್ಸೂರು ವಿಜಯ ಗ್ರಾಮಾಭಿವೃದ್ಧಿ ಸಮಿತಿಯನ್ನು
ಬ್ಯಾಂಕ್ ಆಫ್ ಬರೋಡಾ ವಲಯ ಕಚೇರಿಯ ಉಪ ವಲಯ ಮಹಾಪ್ರಬಂಧಕ ರಾಜೇಶ್ ಶರ್ಮ ರವರು
ಗೌರವಿಸಿದರು. ಸಮಿತಿಯ ಪರವಾಗಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆಯವರು ಗೌರವ ಸ್ವೀಕರಿಸಿದರು. ಜಾಲ್ಸೂರು ಸಮಿತಿಯ ಸುಮಾರು 18 ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜ್ಯೋತಿರಾಜ್ ಉಪಸ್ಥಿತರಿದ್ದರು.















