2027ನೇ ಸಾಲಿನ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷೆ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಅತ್ಯಾಧಿಕ ಮತಗಳ ವಿಜಯಿಯಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುತ್ತಾರೆ.
ವಲಯಾಡಳಿತ ಮಂಡಳಿಯಲ್ಲಿ ಈ ವರ್ಷ ಐದು ಉಪಾಧ್ಯಕ್ಷರ ಹುದ್ದೆಗಳು ಬೇಕಾಗಿದ್ದು, ಅದರಂತೆ ಎಂಟು ಮಂದಿ ನಾಮಪತ್ರ ಸಲ್ಲಿಸಿದರು. ಮತದಾನ ಪ್ರಕ್ರಿಯೆಗಳ ಬಳಿಕ ಮೂರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ನಂತರ ಅಂತಿಮವಾಗಿ ಎರಡು ಹುದ್ದೆಗೆ ಮೂರು ಅಭ್ಯಾರ್ಥಿಗಳ ನಡುವೆ ಮತದಾನ ಪ್ರಕಿಯೆಯು ನವೆಂಬರ್ 1ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಿತು. ವಲಯದ ಎಲ್ಲಾ ಘಟಕಾಧ್ಯಕ್ಷರುಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಅಂತಿಮವಾಗಿ ಲತಾಶ್ರೀ ಸುಪ್ರೀತ್ ಮೋoಟಡ್ಕರವರು ಬಹುಮತದಿಂದ ಆಯ್ಕೆಯಾದರು.
ಅಕ್ಟೋಬರ್ 30 ರಿಂದ ನವೆಂಬರ್ 1ರ ರ ವರೆಗೆ ಮಂಗಳೂರಿನ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ನಡೆದ ಜೇಸಿಐ ಭಾರತ ವಲಯ 15ರ ವಲಯ ಸಮ್ಮೇಳನ ಆರ್ಯ -2026 ರಲ್ಲಿ ಜೇಸಿಐ ಭಾರತದ ನ್ಯಾಷನಲ್ ಎಕ್ಸಿಕ್ಯೂಟಿವ್ ಅಫೀಸರ್
ಜೇಸಿ ಈಶಾನ್ ಅಗರ್ವಾಲ್, ಜೇಸಿಐ ಭಾರತ ವಲಯ 15ರ ನೋಮಿನೇಷನ್ ಕಮಿಟಿ ಚೇರ್ಮೆನ್ ಜೆ. ಎಪ್. ಎಸ್. ಅಭಿಲಾಷ್ ಬಿ. ಎ. ಕುಂದಾಪುರ, ಸದಸ್ಯರಾದ ಪೂರ್ವ ವಲಯಾಧ್ಯಕ್ಷರಾದ ಎಡ್ವಕೇಟ್ ಗಿರೀಶ್ ಎಸ್. ಪಿ. ಕಾಪು, ಜೇಸಿ ಪುರುಷೋತ್ತಮ್ ಶೆಟ್ಟಿ ಪುತ್ತೂರು ಹಾಗೂ ಜೇಸಿ. ರಾಯನ್ ಉದಯನ್ ಕ್ರಾಸ್ತ ಇವರುಗಳು ನಡೆಸಿಕೊಟ್ಟರು.
ಲೇಖಕಿ, ಸಾಹಿತ್ಯ ಸಂಘಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ
ಲತಾಶ್ರೀ ರವರು ಸಾಮಾಜಿಕ ಮುಖಂಡ ಸುಪ್ರೀತ್ ಮೋಂಟಡ್ಕರವರ ಪತ್ನಿ.
ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರಿಗೆ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನ
















