ಶಿವಪ್ರಸಾದ್ ಮೇಲಡ್ತಲೆ ನಿಧನ

ಅರಂತೋಡು: ಅರಂತೋಡು ಗ್ರಾಮದ ಮೇಲಡ್ತಲೆ ನಿವಾಸಿ ಆನಂದ ಗೌಡ ಅವರ ಪುತ್ರ ಶಿವಪ್ರಸಾದ್ ಮೇಲಡ್ತಲೆ ( 50 ವರ್ಷ) ಅವರು ನ.2ರಂದು ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

























ಮೃತರು ತಂದೆ ಆನಂದ ಗೌಡ ಮೇಲಡ್ತಲೆ, ತಾಯಿ ಕುಸುಮಾವತಿ, ಪತ್ನಿ ಯಶೋಧಾ, ಮಕ್ಕಳಾದ ವಂಶಿ ಹಾಗೂ ನಿಶಿ ಸೇರಿದಂತೆ ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಶಿವಪ್ರಸಾದ್ ಅವರು ಅಡ್ತಲೆ ಬೆದ್ರುಪಣೆ ಶ್ರೀ ಉಲ್ಲಾಕುಳು ಮತ್ತು ಮಲೆದೈವಗಳ ಚಾವಡಿಯ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top