ಸುಳ್ಯ: ಸುಳ್ಯ ಸೀಮೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ವಾರದ ಭಜನೆ ಸೇವೆ ಭಕ್ತಿಭಾವದಿಂದ ನಡೆಯಿತು.
ಈ ವಾರದ ಭಜನೆ ಸೇವೆಯನ್ನು ಶ್ರೀ ಮಲ್ಲಿಕಾರ್ಜುನ ಭಜನಾ ಸಂಘ, ತೊಡಿಕಾನ ಹಾಗೂ ಶ್ರೀ ಕೃಷ್ಣ ಭಜಕ ವೃಂದ, ಗೂನಡ್ಕ ಇವರು ಜಂಟಿಯಾಗಿ ನಡೆಸಿಕೊಟ್ಟರು. ಭಜನಾ ತಂಡಗಳ ಸದಸ್ಯರು ಭಕ್ತಿಗೀತೆಗಳನ್ನು ಹಾಡುವ ಮೂಲಕ ದೇವರ ಸನ್ನಿಧಿಯಲ್ಲಿ ಭಕ್ತಿಮಯ ವಾತಾವರಣವನ್ನು ಸೃಷ್ಟಿಸಿದರು.
ಭಜನಾ ಸೇವೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
















