ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ (ರಿ) ಅರಂತೋಡು ಇದರ ಸುವರ್ಣ ಮಹೋತ್ಸವ ವರ್ಷಾಚರಣೆ ಅಂಗವಾಗಿ ಭಾರತೀಯ ಅಂಚೆ ಇಲಾಖೆಯ ಸಂಯೋಗದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವು ನ. 14 ರಂದು ಅರಂತೋಡು ಪಠೇಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಆಧಾರ್ ನೋಂದಣಿ ಶಿಬಿರವನ್ನು ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಉದ್ಘಾಟಿಸಿದರು. ಅವರು ಮಾತನಾಡಿ ಸರಕಾರಿ ಸೇವೆಯನ್ನು ಸಂಘ ಸಂಸ್ಥೆಗಳ ಮೂಲಕ ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ಶ್ಲಾಘನೀಯವಾದದ್ದು ಅದನ್ನು ಅರಂತೋಡು ಅನ್ವಾರುಲ್ ಹುಧಾ ಎಸೋಸಿಯೇಶನ್ ಸಂಸ್ಥೆ ಮಾಡುತ್ತಿದೆ. 50 ವರ್ಷಗಳನ್ನು ಪೂರೈಸಿದ ಈ ಸಂಸ್ಥೆಯು ಅನೇಕ ಹಿರಿಯರ ತ್ಯಾಗದ ಫಲವಾಗಿ ಬೆಳೆದಿದೆ. ಅರಂತೋಡಿನ ಕ್ರೀಯಾಶೀಲ ಸಂಸ್ಥೆಗಳಲ್ಲಿ ಅನ್ವಾರುಲ್ ಹುಧಾ ಒಂದು ಎಂದರು.
ನಿವೃತ್ತ ಉಪನ್ಯಾಸಕ ಎ.ಅಬ್ದುಲ್ಲ ಮಾಸ್ಟರ್, ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಗೋಪಾಲಕೃಷ್ಣ ಬನ, ಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅನ್ವಾರುಲ್ ಹುಧಾ ಎಸೋಸಿಯೇಶನ್ ಅಧ್ಯಕ್ಷ ಅಮೀರ್ ಕುಕ್ಕುಂಬಳ ಅಧ್ಯಕ್ಷತೆ ವಹಿಸಿದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಪ್ರ.ಕಾರ್ಯದರ್ಶಿ ಪಸೀಲು, ಕೋಶಾಧಿಕಾರಿ ಸಂಶುದ್ಧೀನ್ ಪೆಲ್ತಡ್ಕ ಜಮಾಅತ್ ಕಾರ್ಯದರ್ಶಿ, ಕೆ.ಎಂ ಮೂಸಾನ್ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷ ಜುಬೈರ್, ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಪ್ರಸನ್ನ ಅಜ್ಜನ ಗದ್ದೆ, ಎ.ಹನೀಫ್ , ಅರಂತೋಡು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕ ಧನಂಜಯ ಮೇರ್ಕಜೆ, ಕೆ.ಯು.ಅಜಾರುದ್ಧೀನ್, ಮೊಯಿದು ಕುಕ್ಕುಂಬಳ, ಕಬೀರ್ ಸೆಂಟ್ಯಾರ್, ತಾಜುದ್ಧೀನ್ ಅರಂತೋಡು, ಅನ್ ಶಾಫ್ ಕೊಡಂಕೇರಿ, ಆಶಿಕ್ ಕುಕ್ಕುಂಬಳ ಮೊದಲಾದವರು ಉಪಸ್ಥಿತರಿದ್ದರು. ತಾಜುದ್ಧೀನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಂಚೆ ಇಲಾಖೆಯ ಸಿಬ್ಬಂಧಿ ವಿದ್ಯಾಶ್ರೀ ಮತ್ತು ಮೇಘ ಸಹಕರಿಸಿದರು.
ಅನ್ವಾರುಲ್ ಹುಧಾ ಯಂಗ್ ಮೆನ್ಸ್ ವತಿಯಿಂದ ಆಧಾರ್ ನೋಂದಣಿ ಶಿಬಿರ* ಉದ್ಘಾಟನೆ






































