ಸುಳ್ಯ: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಕನಕಮಜಲು ಗ್ರಾಮದ ವೈಷ್ಣವಿ ಕೆ.ಬಿ. ಬುಡ್ಡೆಗುತ್ತು ಉತ್ತೀರ್ಣರಾಗಿದ್ದಾರೆ.
ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಎಡ್. ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. (ಬಯೋಕೆಮಿಸ್ಟ್ರಿ) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಇವರು ಕನಕಮಜಲು ಗ್ರಾಮದ ದಯಾನಂದ ಗೌಡ ಬುಡ್ಡೆಗುತ್ತು ಮತ್ತು ಗಾಯತ್ರಿ ದಯಾನಂದ ಗೌಡ ದಂಪತಿಯ ಪುತ್ರಿ.
ಕೆ-ಸೆಟ್ ಪರೀಕ್ಷೆಯಲ್ಲಿ ವೈಷ್ಣವಿ ಕೆ.ಬಿ ಉತ್ತೀರ್ಣ








































