ರೆಂಜಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ರೆಂಜಾಳ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ರುದ್ರಾಭಿಷೇಕ ಹಾಗೂ ಭಜನಾ ಸೇವೆ ನೆರವೇರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಜನ್ಮದಿನದ ಅಂಗವಾಗಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಗಣ್ಯರು ಭಾಗವಹಿಸಿ ದೇವರ ಸೇವೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಜನಜಾಗೃತಿ ವಲಯ ಅಧ್ಯಕ್ಷ ಸತೀಶ್ ರಾವ್ ದಾಸರಬೈಲು, ಭಜನಾ ಪರಿಷತ್ ವಲಯ ಅಧ್ಯಕ್ಷೆ ಭಾರತಿ ಪುರುಷೋತ್ತಮ ಉಳುವಾರು, ಕಾರ್ಯದರ್ಶಿ ನಾರಾಯಣ ಅಜ್ಜಿಕಲ್ಲು, ಜನಜಾಗೃತಿ ಸದಸ್ಯ ಜಗನ್ಮೋಹನ್ ರೈ, ಊರಿನ ಗಣ್ಯರಾದ ದಾಮೋದರ ಪಾಟಾಳಿ, ಸರಸ್ವತಿ ಕಕ್ಕಾಡು, ರಾಜೇಶ್ವರಿ, ಮರ್ಕಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಗೀತಾ ಹೊಸಳಿಕೆ ಉಪಸ್ಥಿತರಿದ್ದರು.
ಅಲ್ಲದೆ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ಬಲ್ಕಡಿ, ಪ್ರಸನ್ನ ಕೆ.ಪಿ., ಅಶೋಕ ಪೀಚೆ, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ಘಟಕದ ಸದಸ್ಯರು, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು, ವಲಯದ ಮೇಲ್ವಿಚಾರಕ ಹರೀಶ ಆಚಾರ್ಯ, ವಲಯದ VIE, ಸುವಿಧಾ ಸಹಾಯಕರು ಹಾಗೂ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.








































