ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿರುವುದು ಅರೆಭಾಷಿಕರಿಗೆ ಸಂದ ಗೌರವ : ಹೊದ್ದೆಟ್ಟಿ ಭವಾನಿಶಂಕರ

ನಮ್ಮೇಲ್ಲರ ಪ್ರಯತ್ನದಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿದೆ‌.ಇದು ಅರೆಭಾಷಿಕರಿಗೆ ಸಂದ ಗೌರವ ಎಂದು ಅರೆಭಾಷೆಯ ಮೊದಲಿನ ಕವಿ ಹೊದ್ದೆಟ್ಟಿ ಭವಾನಿಶಂಕರ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ,ಅರೆಭಾಷೆ ಸಂಸ್ಕೃತಿ ಮತ್ರು ಸಾಹಿತ್ಯ ಸಂಘ ಸರಕಾರಿ ಪ್ರಥಮ ಕಾಲೇಜು ಕೊಡಿಯಾಲಬೈಲು ಇವರ ಆಶ್ರಯದಲ್ಲಿ ಕೊಡಿಯಾಲಬೈಲು ಪ್ರಥಮ‌ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ನಡೆದ ಅರೆಭಾಷೆಯ ಮೊದಲಿನ ಕವಿ ಹೊದ್ದೆಟ್ಟಿ ಭವಾನಿಶಂಕರ ಅವರ ಸಾಹಿತ್ಯಾವಲೋಕನ ಮತ್ತು ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ತಂಡದವರಿಂದ ಅಕಾಡೆಮಿ ಕಡೆಯಿಂದ ಅರೆಭಾಷೆ ಬೆಳವಣಿಗೆ ಬಗ್ಗೆ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಬೆಳವಣಿಗೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಕುವುದರ ಮೂಲಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಬೆಳಣಿಗೆಗೆ ವಿಶೇಷ ಪ್ರಯತ್ನ ಮಾಡಲಾಗುತ್ತದೆ.ಅರೆಭಾಷೆಯ ಬೆಳವಣಿಗೆಗೆ ಇನ್ನಷ್ಟು ಸೃಜನಶೀಲ ಸಾಹಿತ್ಯದ ಅಗತ್ಯ ಇದೆ.ಅರೆಭಾಷೆಯ ಸಾಹಿತಿ,ಕವಿಗಳಿಗೆ ಸಾಕಾಷ್ಟು ಅವಕಾಶಗಳಿವೆ ಎಂದು ಹೇಳಿದರು.
ಕಾರ್ಯಕ್ರಮ ಸದಸ್ಯ ಸಂಚಾಲಕ ಡಾ.ಎನ್.ಎ ಜ್ಞಾನೇಶ್ ಪ್ರಾಸ್ತಾವಿಕವಾಗಿ ಮಾತನಾಡಿ
ಅರೆಭಾಷೆ ಉಳಿಸಿ ಬೆಳೆಸುವ ಉದ್ದೇಶದಿಂದ ತಾಲೂಕಿನ ಐದು ಕಾಲೇಜುಗಳಲ್ಲಿ ಕರ್ನಾಟಕ ಅರೆಭಾಷೆ ಸಾಹಿತ್ಯ ಸಂಘದ ನೇತ್ರತ್ವದಲ್ಲಿ ಅರೆಭಾಷೆ ಸಂಸ್ಕತಿ ಮತ್ತು ಸಾಹಿತ್ಯ ಸಂಘವನ್ನು ರಚನೆ ಮಾಡಲಾಗಿದೆ .ಈ ಸಂಘಗಳ ಮೂಲಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಅಕಾಡೆಮಿ ಸದಸ್ಯ ಸೂದನ ಈರಪ್ಪ ಉಪನ್ಯಾಸ ನೀಡಿದರು. ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಎ.ಕೆ ಹಿಮಕರ ಭವಾನಿಶಂಕರ ಹೊದ್ದೆಟಿಯವರ ಸಾಹಿತ್ಯಾವಲೋಕನ ಮಾಡಿದರು.ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಕಾಡೆಮಿ ಸದಸ್ಯರಾದ ತೇಜ್ ಕುಮಾರ್ ಕುಡೆಕಲ್ಲು,ಲತಾಪ್ರಸಾದ್, ಬಾಲಕೃಷ್ಣ ಎಸ್.ಪಿ,ಐಕ್ಯೂಸಿ ಸಂಚಾಲಕ ರಾಮಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಸಂಘದ ಅಧ್ಯಕ್ಷ ಹಿತೇಶ್ ಕೆ.ಡಿ ಸ್ಚಾಗತಿಸಿದರು‌.ಯಕ್ಷಿತಾ ಟಿ.ಎಲ್ ಕಾರ್ಯಕ್ರಮ ನಿರೂಪಿಸಿದರು‌.ಭಾಗ್ಯಶ್ರೀ ಕುದ್ಕುಳಿ ಕವಿಗಳ ಪರಿಚಯ ಮಾಡಿದರು‌.ಜಯದೇವ ಬಳ್ಳಡ್ಕ ಮತ್ತು ತಂಡದವರು ಹಾಡು ಹಾಡಿದರು.ಯಶಿಕ ಉಳುವಾರು ವಂದಿಸಿದರು. ಮಧ್ಯಾಹ್ನನಂತರ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಕವನ, ಹಾಡು, ಒಗಟು, ಕಿರುಚಿತ್ರ ತಯಾರಿ ಸ್ಪರ್ಧೆ ನಡೆಯಿತು.





































































































Leave a Comment

Your email address will not be published. Required fields are marked *

error: Content is protected !!
Scroll to Top