ಸುಳ್ಯ : ದೇವಸ್ಥಾನಗಳು ಸಂಸ್ಕತಿಯ ಕೇಂದ್ರವಾದರೆ ದೈವಸ್ಥಾನಗಳು ಸಂಸ್ಕಾರದ ಕೇಂದ್ರಗಳಾಗಿವೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.
ಸುಳ್ಯ ನಾವೂರು ನವೀಕ್ರತ ಶಿಲಾಮಯ ಗುಡಿಯಲ್ಲಿ ಶ್ರೀ ಕಲ್ಕುಡ ಕಲ್ಲುರ್ಟಿ ಹಾಗೂ ಗುಳಿಗ ದೈವದ ಕಟ್ಟೆಯಲ್ಲಿ ಪುನರ್ ಪ್ರತಿಷ್ಠಾ ಕಲಶೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಆಧುನಿಕ ಕಾಲಘಟ್ಟದಲ್ಲಿ ಯುವ ಜನತೆ ಧಾರ್ಮಿಕ ನಂಬಿಕೆಯಿಂದ ವಿಮುಖವಾಗುತ್ತಿರುವುದು ವಿಷಾಧದ ವಿಷಯ.ಧಾರ್ಮಿಕ ಪ್ರಜ್ಞೆ ಯೊಂದಿಗೆ ರಾಷ್ಟ್ರೀತೆಯತೆ ಭಾವನೆ ಮೂಡಿಸುವ ಜವಾಬ್ದಾರಿಯೂ ಶ್ರದ್ಧಾ ಕೇಂದ್ರಗಳಿಂದ ನಡೆಯಬೇಕು.ಇಂದು ದೇವಸ್ಥಾನಗಳು,ದೈವಸ್ಥಾನಗಳು,ಭಜನಾ ಮಂದಿರಗಳು ಧರ್ಮದ ಅಸ್ಮಿತೆಯನ್ನು ಉಳಿಸುವ ಕೆಲಸವನ್ನು ಮಾಡುತ್ತಿವೆ ಎಂದು ಶ್ರೀಗಳು ನುಡಿದರು.
ಶ್ರೀ ಕಲ್ಕುಡ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಶ್ರೀ ಕ್ರಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ಬ್ರಹ್ಮಶ್ರೀ ಮೇ.ಮೂ.ದೇಲಂಪಾಡಿ ಗಣೇಶ ತಂತ್ರಿ,ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್( ರಿ ) ಸುಳ್ಯದ ಅಧ್ಯಕ್ಷ ಡಾ.ಚಿದಾನಂದ ಕೆ.ವಿ, ಶ್ರೀ ಚೆನ್ನಕೇಶವ ದೇವಳದ ಆಡಳಿತ ಅನುವಂಶಿಕ ಮೊಕ್ತೇಸರ ಹರಪ್ರಸಾದ್ ತುದಿಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
.ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ದಿನೇಶ್ ಮಡಪ್ಪಾಡಿ ಸ್ವಾಗತಿಸಿದರು.
ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ದೇವಸ್ಥಾನಗಳು ಸಂಸ್ಕತಿಯ ಕೇಂದ್ರವಾದರೆ ದೈವಸ್ಥಾನಗಳು ಸಂಸ್ಕಾರದ ಕೇಂದ್ರಗಳಾಗಿವೆ :ಎಡನೀರು ಶ್ರೀ





























































