ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಕೊಡಿಯಾಲ ಬೈಲ್ ಮಹಾತ್ಮ ಗಾಂಧಿ ಮಲ್ನಾಡ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಸುಳ್ಯ ಪೊಲೀಸ್ ಠಾಣೆಯಲ್ಲಿ ಜೂ 18 ರಂದು ಆಯೋಜಿಸಲಾಗಿತ್ತು.ಮಕ್ಕಳಿಗೆ ಸಂಬಂಧಿತ ಕಾನೂನುಗಳು ಹಾಗೂ ಪೊಲೀಸ್ ಠಾಣಾ ಕಾರ್ಯ ವೈಖರಿ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಕಾರ್ಯಾಗಾರ ನಡೆಯಿತು.
ಠಾಣಾ ಉಪನಿರೀಕ್ಷಕರಾದ ಸಂತೋಷ್ ಕುಮಾರ್ ಬಿ. ಪಿ ರವರು ಪೊಲೀಸ್ ಠಾಣೆಯಲ್ಲಿ ನಡೆಯುವ ಕಾರ್ಯಗಳ ಬಗ್ಗೆ ಠಾಣೆಯಲ್ಲಿನ ಎಲ್ಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕೊಠಡಿ ಮತ್ತು ಉಪಕರಣ, ಬಂದಿಕಾನ ಮುಂತಾದ ವಿಷಯಗಳ ಕುರಿತು ಅರಿವು ಹಾಗೂ ಮಾಹಿತಿಯನ್ನು ಮೂಡಿಸಿದರು.
ಮಕ್ಕಳ ಹಕ್ಕುಗಳ ಬಗ್ಗೆ ಇರುವ ಕಾನೂನು, ಮಕ್ಕಳ ರಕ್ಷಣೆ ಮತ್ತು ಸಂಚಾರ ನಿಯಮಗಳ ಕುರಿತಾದ ಮಾಹಿತಿಯನ್ನು ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಕೃಷ, ಮಕ್ಕಳ ಕಾನೂನು, ಪೋಕ್ಸೋ ಕಾಯಿದೆ, ಠಾಣಾ ವೈಖರಿಯ ಬಗ್ಗೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಶ್ರೀಮತಿ. ಜ್ಯೋತಿಯವರು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಇದರ ಅಧ್ಯಕ್ಷರಾದ ಜೆ. ಎಫ್. ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಎಂ. ಜಿ. ಎಂ ಸಂಸ್ಥೆಯ ಸಂಚಾಲಕರಾದ ದೊಡ್ಡಣ್ಣ ಬರೆಮೇಲು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಎನ್ ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ ಎಸ್ ಐ ರವರು ವಿದ್ಯಾರ್ಥಿಗಳು ಕೇಳುವ ಕಾನೂನು ಅರಿವಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಪ್ರಶ್ನೆಯನ್ನು ಕೇಳಿದ ಮೂರು ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಜೇಸಿಐ ಸುಳ್ಯ ಪಯಶ್ವಿನಿ ವತಿಯಿಂದ ಅಧ್ಯಕ್ಷರಾದ ಲತಾಶ್ರೀ ಮೋಟಡ್ಕ ರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ವಂದಿಸಿದರು.
ಈ ಸಂದರ್ಭದಲ್ಲಿ ಜೇಸಿ. ಹೆಚ್.ಜಿ.ಎಪ್ ತಾರಾ ಮಾಧವ ಚೂಂತಾರು, ಜೇಸಿ ಸತ್ಯ ಶಾಂತಿ
ತ್ಯಾಗ ಮೂರ್ತಿ, ಪ್ರಶಾಂತ್ ಅಂಬೆಕಲ್ಲು, ಶಿಕ್ಷಕರುಗಳಾದ ಚಿತ್ರಲೇಖಾ ಮಡಪ್ಪಾಡಿ, ಚೈತ್ರಾ ಬಿ ಡಿ, ಶಿವರಂಜಿನಿ, ದಿವ್ಯ ಎನ್, ದೈಹಿಕ ಶಿಕ್ಷಕರಾದ ಜಯಪ್ರಕಾಶ್ ಕೆ ಮುಖಂಡರಾದ ಸುಪ್ರೀತ್ ಮೋoಟಡ್ಕ ಹಾಗೂ ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಳ್ಯ ಪೊಲೀಸ್ ಠಾಣೆಯಲ್ಲಿ ಜೇಸಿಐ ಸುಳ್ಯ ಪಯಶ್ವಿನಿ ವತಿಯಿಂದ ಮಹಾತ್ಮಾ ಗಾಂಧಿ ಮಲ್ನಾಡ್ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮ





























































