ಸುಳ್ಯದಲ್ಲಿ ಅರೆಭಾಷೆ ಅಕಾಡೆಮಿ ವತಿಯಿಂದಜೇಸಿಐ ಸುಳ್ಯ ಪಯಸ್ವಿನಿ & ಸಂಧ್ಯಾ ಚೇತನ ಪ್ರವಾಸ ಬಳಗ ಸಹಯೋಗದಲ್ಲಿ ಆಟಿ ಕೂಟ – 2026

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಜೇಸಿಐ ಸುಳ್ಯ ಪಯಸ್ವಿನಿ (ರಿ.), ಸುಳ್ಯ , ಸಂಧ್ಯಾ ಚೇತನ ಪ್ರವಾಸ ಬಳಗ ಸುಳ್ಯ ಇವರ ಆಶ್ರಯದಲ್ಲಿ ಆಟಿ ಕೂಟ 2026 ಆ.15ರಂದು ಸುಳ್ಯದ ಅಂಬಟೆಡ್ಕದ ಕನ್ನಡ ಭವನದಲ್ಲಿ ನಡೆಯಿತು.
ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ ಕೆ.ಆರ್‌ ಗಂಗಾಧರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ವಹಿಸಿದ್ದರು.
ನಿವೃತ್ತ ಪ್ರಾಂಶುಪಾಲ ರಮಾ ವೈ ಕೆ ಆಟಿ ಬಗ್ಗೆ ಮಾತನಾಡಿ ಆಟಿ ತಿಂಗಳ ಮಹತ್ವ ವಿವರಿಸಿದರು.
ಜೇಸಿಐ ವಲಯ 15ರ ಜೆಡ್‌ ಡಿ ಸುಹಾಸ್‌ ಮರಿಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷೆ ಜೆ. ಎಫ್. ಎಂ. ಲತಾಶ್ರೀ ಸುಪ್ರೀತ್ ಮೋoಟಡ್ಕ ಕಾರ್ಯಕ್ರಮಕ್ಕೆ ಶುಭ ಹಾರೈಸಿ, ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.
ವೇದಿಕೆಯಲ್ಲಿ
ಸಂಧ್ಯಾ ಚೇತನಾ ಪ್ರವಾಸ ಬಳಗದ ಗೌರವಾಧ್ಯಕ್ಷ ಡಾ. ರಂಗಯ್ಯ, ಅಧ್ಯಕ್ಷ ಚೆನ್ನಕೇಶವ ಜಾಲ್ಸುರು, ಅಕಾಡೆಮಿ ಸದಸ್ಯರಾದ ಗೋಪಾಲ ಪೆರಾಜೆ, ಶ್ರೀಮತಿ ಲತಾ ಪ್ರಸಾದ್ ಕುದುಪಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ನಡೆದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸದಸ್ಯ ಸಂಚಾಲಕಿ ಚಂದ್ರಾವತಿ ಬಡ್ಡಡ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಜೇಸಿ. ಸತ್ಯಶಾಂತಿ ತ್ಯಾಗಮೂರ್ತಿ ಜೇಸಿವಾಣಿ ವಾಚಿಸಿದರು.
ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು, ಜೇಸಿ ತಾರಾ ಮಾದವ ಚೂಂತಾರು ವಂದಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ
ಆಟಿ ಊಟದ ವ್ಯವಸ್ಥೆ ಇತ್ತು.

























Leave a Comment

Your email address will not be published. Required fields are marked *

error: Content is protected !!
Scroll to Top