ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭ

ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರದಲ್ಲಿ ಆಗಸ್ಟ್ 2ರಂದು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭಗೊoಡಿದೆ .
ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಜೀಯವರು ದೀಪ ಪ್ರಜ್ವಲಿಸಿ ತರಗತಿ ಪ್ರಾರಂಬಿಸಿದರು‌.
ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಎ.ಎಸ್.ಐ ಕುಶಾಲಪ್ಪ‌ಗೌಡ,ಆಶ್ರಮದ ಟ್ರಸ್ಟಿ ಪ್ರಣವಿ,ವೇಣುಗೋಪಾಲ ಅಡೂರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.
ಪ್ರತೀ ಭಾನುವಾರ ಬೆಳಿಗ್ಗೆ ಗಂಟೆ 10ರಿಂದ 11ರ ತನಕ ತರಗತಿ ನಡೆಯಲಿದೆ.
ಜಪ, ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಲು ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕೆ ಜಾತಿ, ಮತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ತರಗತಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸ್ವಾಮಿಜಿ ತಿಳಿಸಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top