ಚಿನ್ನಪ್ಪ ‌ಗೌಡರು ಅಪೂರ್ವ ಸಾಧಕರು : ಚಂದ್ರಶೇಖರ ಪೇರಾಲ್

ಚಿನ್ನಪ್ಪ ಗೌಡರು ಕಷ್ಟದಲ್ಲಿ ಬೆಳದು ಬಂದು ಹೋರಟದ ಮೂಲಕ ಉದ್ಯೋಗ ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲ್ ಹೇಳಿದರು.
ಚಿನ್ಬಪ್ಪ ಗೌಡ ಅಭನಂದನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ನಿವೃತ್ತ ಶಿಕ್ಷಕರಾದ ಚಿನ್ನಪ್ಪ ಗೌಡ ಎಮ್,ಅವರಿಗೆ ಆ.2ರಂದು ಲಯನ್ಸ್ ಕ್ಲಬ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಅಭಿನಂದನಾ ಭಾಷಣ ಮಾಡಿದರು.




















ಗ್ರಾಮೀಣ ಕ್ರೀಡೆ, ನಮ್ಮ‌ ಮೂಲ ಸಂಸ್ಕೃತಿ,ಜಾನಪದ ಕುಣಿತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಚಿನ್ನಪ್ಪ ಗೌಡರು ಸಿ.ಸಿ.ಆರ್.ಟಿ ತಂಡದೊಂದಿಗೆ ಅಂತರ್ ರಾಜ್ಯ ಸಾಂಸ್ಕೃತಿಕ ವಿನಿಮಯದ ಮೂಲಕ ಗುರುತಿಸಿಕೊಂಡು ಸಾಧನೆ ಮಾಡಿದ್ದಾರೆ ಎಂದು ಹೇಳಿ ನಿವೃತ್ತ ಜೀವನಕ್ಕೆ ಶುಭ ಹಾರೈಸಿದರು.
ಬಿ‌.ಇ.ಒ ವೈ.ಎಸ್ ಹರಗಿ ಮಾತನಾಡಿ ಚಿನ್ನಪ್ಪ ಗೌಡರು ತನ್ನಲ್ಲಿರುವ ಎಲ್ಲಾ ವಿದ್ಯೆಗಳನ್ನು ವಿದ್ಯಾರ್ಥಿಗಳಿಗೆ ಧಾರೆಯರೆದು ಅನೇಕರನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ರೂಪಿಸಿದ್ದಾರೆ.ಅವರು ನಮ್ಮ‌ ಶಿಕ್ಷಣ ಇಲಾಖೆಯ ಸಂಪತ್ತು.ಅವರ ಕಾರ್ಯವೈಖರಿಯನ್ನು ಅತೀ ಹತ್ತಿರದಿಂದ ನೋಡಿ ಮೆಚ್ಚಿದ್ದೇನೆ ಎಂದು ಹೇಳಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಚಿನ್ನಪ್ಪ ಗೌಡರು


ನಾನು ಓರ್ವ ಶಿಕ್ಷಕ ಮಾಡಬೇಕಾದ ಕರ್ತವ್ಯವನ್ನು ಮಾಡಿದ್ದೇನೆ ಹೊರತು ಹೆಚ್ಚಿಗೆ ಏನು ಮಾಡಿಲ್ಲ,ಶೈಕ್ಷಣಿಕ ಕ್ಷೇತ್ರ ಸಮಾಜ ಒಂದು ಭಾಗ.ಇದು ನಮ್ಮ ನೆನಪಿನಲ್ಲಿರಬೇಕು.ನಾವು ತಿಂಗಳಿಗೆ ಒಂದು ಲಕ್ಷ ಸಂಬಳ ತೆಗೆದುಕೊಂಡರೆ ಎರಡು ಲಕ್ಷದಷ್ಟು ಕೆಲಸ ಮಾಡಬೇಕು.ಹಣ ಮುಖ್ಯವಲ್ಲ ಪ್ರೀತಿ ವಿಶ್ವಾಸ ಮುಖ್ಯ.ನನ್ನ ಮೇಲಿನ ಪ್ರೀತಿಯಿಂದ ತೆಲಂಗಾಣದಿಂದ

ಲಿಂಗರೆಡ್ಡಿ,ಪಶ್ವಿಮ ಬಂಗಾಳದಿಂದ ಜನಾರ್ದನ ಸರ್ಕಾರ್ , ಕೇರಳದಿಂದ ಪ್ರಶಾಂತ್ ಮಾಸ್ತರ್ ಬಂದಿದ್ದಾರೆ‌.ನಾವು ಎಲ್ಲಾರ ಪ್ರೀತಿಗಳಿಸಿ ಕೈಲಾದಷ್ಟು ಸಮಾಜಕ್ಕೆ ಸೇವೆ ಮಾಡಬೇಕು ಎಂದು ಹೇಳಿದರು.


ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಜ್ ಚಿನ್ನಪ್ಪ ಗೌಡರಿಗೆ ಶುಭ ಹಾರೈಸಿದರು.
ಚಿನ್ನಪ್ಪ ಗೌಡರ ವಿದ್ಯಾರ್ಥಿ ಜೀವನಕ್ಕೆ ಸಹಕಾರ ಮಾಡಿದ ಅವರ ಅಣ್ಣ ನಿವೃತ್ತ ಕ್ರಷಿ ಅಧಿಕಾರಿ ಶಿವಯ್ಯ ಗೌಡ,ರವಿಪ್ರಕಾಶ್ ಕುರುಂಜಿ ಮತ್ತು ಆಪ್ತ ನೆಲೆಯಲ್ಲಿ ಚಂದ್ರಶೇಖರ ಪೇರಾಲ್ ಅವರನ್ನು ಚಿನ್ನಪ್ಪ ಗೌಡರು ಸನ್ಮಾನಿಸಿದರು.

ಚಿನ್ನಪ್ಪ ಗೌಡ ಅಭಿನಂದನಾ ಸಮಿತಿ ಹಾಗೂ ಶಿಕ್ಷಕರು,ಹಿರಿಯ ವಿದ್ಯಾರ್ಥಿಗಳು, ಅಭಿಮಾನಿಗಳು,ಮಿತ್ರರು ಬಂದುಗಳು ಚಿನ್ನಪ್ಪ ಗೌಡ ದಂತಿಗಳನ್ನು ಅಭಿನಂದಿಸಿದರು.
ಚಿನ್ನಪ್ಪ ಗೌಡ ಅಭಿನಂದನಾ ಸಮಿತಿಯ ಅಧ್ಯಕ್ಷೆ ಶೀತಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಮತ ಮತ್ತು ಆಶಾ ಕೆ.ಟಿ ಕಾರ್ಯಕ್ರ ನಿರೂಪಿಸಿದರು.
ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಶಿಕ್ಷಕ ಪ್ರಸಾದ್ ನಲ್ಲೂರು ಸ್ಯಾಕ್ಸೋಪೋನ್ ವಾದನ ನುಡಿಸಿದರು. ದೇವಿಕಾ ಮಂಚಿ ಮತ್ತು ತಂಡ ವಯೊಲಿನ್ ವಾದನ ನಡೆಯಿತು.ಶಿವಾನಂದ ಉಪ್ಪಳ ಮತ್ತು ತಂಡ ಕೀಬೋರ್ಡ್ ವಾದನ ನುಡಿಸಿದರು.ಬಾಬಣ್ಣ ಪುತ್ತೂರು ತಂಡ ಮ್ಯಾಂಡೊಲಿನ್ ವಾದನ ನೀಡಿದರು‌‌.

Leave a Comment

Your email address will not be published. Required fields are marked *

error: Content is protected !!
Scroll to Top