ಸಂಪಾಜೆ ಕಾಡು ಕೋಣ ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು

ಕಾಡುಕೋಣ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇಲೆ ಸಂಪಾಜೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ಮಾಡಿ ಪೆರಾಜೆ ಗ್ರಾಮದ ಶರತ್, ಮತ್ತು ಗೌತಮ್ ಅವರನ್ನು ಮತ್ತು ವಾಹನವನ್ನು ವಶ ಪಡಿಸಿಕೊಂಡಿದ್ದ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರುಗೊಂಡಿದೆ ಎಂದು ತಿಳಿದು ಬಂದಿದೆ.
ಅರೋಪಿಗಳನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಅಲ್ಲಿಯ ನ್ಯಾಯಾಧೀಶರು ಕಾಡು ಕೋಣ ಹತ್ಯೆ ಮಾಡಿದ ಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕಾಡುಪಂಜ ಸ್ಥಳ ಸುಳ್ಯ ತಾಲೂಕಿಗೆ ಸೇರಿದ ಸ್ಥಳವಾಗಿರುವ ಕಾರಣ ಕೇಸ್ ಅನ್ನು ಸ್ವೀಕಾರ ಮಾಡದೆ ಸುಳ್ಯ ಅರಣ್ಯ ಇಲಾಖೆ ಮತ್ತು ಸುಳ್ಯ ನ್ಯಾಯಾಲಯಕ್ಕೆ ಒಪ್ಪಿಸಲು ಸೂಚಿಸಿದರು ಎನ್ನಲಾಗಿದೆ.
ನಂತರ ಸಂಪಾಜೆ ಅರಣ್ಯ ಇಲಾಖೆ ಆರೋಪಿಗಳನ್ನು ಸುಳ್ಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದರು ಎನ್ನಲಾಗಿದ್ದು ಸುಳ್ಯ ಅರಣ್ಯ ಇಲಾಖೆಯು ಆರೋಪಿಗಳನ್ನು ರಾತ್ರಿ ಜಡ್ಜ್ ಮುಂದೆ ಹಾಜರು ಪಡಿಸಿದ್ದರು.
ಆರೋಪಿಗಳ ಪರವಾಗಿ ವಕೀಲ ಕೆ. ಎಲ್. ಪ್ರಧೀಪ್ ಕುಮಾರ್ ಹಾಗೂ ಕಾಯರ ಚರಣ್ ಅವರು ಜಡ್ಜ್ ಮುಂದೆ ಜಾಮೀನು ಮಂಜುರಾತಿ ಕೋರಿ ಅರ್ಜಿ ಸಲ್ಲಿಸಿದ್ದರು.
ಮಾನ್ಯ ನ್ಯಾಯಾಧೀಶರು ಪರಿಶೀಲಿಸಿ ಇಬ್ಬರು ಆರೋಪಿಗಳಿಗೆ ಮದ್ಯಾಂತರ ಜಾಮೀನು ಮಂಜೂರು ಮಾಡಿರುತ್ತಾರೆ ಎಂದು ತಿಳಿದು ಬಂದಿದೆ.



















Leave a Comment

Your email address will not be published. Required fields are marked *

error: Content is protected !!
Scroll to Top