ಹೃದಯಾಘಾತದಿಂದ ಮಾಜಿ ಗ್ರಾ.ಪಂ. ಸದಸ್ಯೆ ನೀಲಮ್ಮ ನಿಧನ

ಸಂಪಾಜೆ: ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದ ಕೈಪಡ್ಕ ನಿವಾಸಿ ರಾಮಣ್ಣ ಮಣಿಯಾಣಿ ಅವರ ಪತ್ನಿ ಹಾಗೂ ಮಾಜಿ ಸಂಪಾಜೆ ಗ್ರಾಮ ಪಂಚಾಯತ್‌ ಸದಸ್ಯೆ ನೀಲಮ್ಮ (58) ಅವರು ಸೆ.30ರಂದು ಹೃದಯಾಘಾತದಿಂದ ನಿಧನರಾದರು.ರಾತ್ರಿ ವೇಳೆ ಮನೆಯಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ಅವರನ್ನು ಮನೆಯವರು ತಕ್ಷಣ ಕಾರಿನಲ್ಲಿ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.ಮೃತರು ಪತಿ ರಾಮಣ್ಣ ಮಣಿಯಾಣಿ, ಪುತ್ರಿ ಶಾಲಿನಿ, ಪುತ್ರ ಶರತ್‌ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.















Leave a Comment

Your email address will not be published. Required fields are marked *

error: Content is protected !!
Scroll to Top