ಕೊಯನಾಡು : ಅಪಘಾತದಲ್ಲಿ ಗಾಯಗೊಂಡ ಯುವಕ‌ ಸಾವು

ಅರಂತೋಡು : ಮೂರು ವಾರಗಳ ಹಿಂದೆ ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ಗಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಯುವಕ ಚಿಕಿತ್ಸೆ ಫಲಕಾರಿಯಾಗದೆ
ಆ.30ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮ್ರತಪಟ್ಟ ಘಟನೆ ವರದಿಯಾಗಿದೆ.
ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕೊಯನಾಡಿನ ಚಿನ್ನಪ್ಪ ಗೌಡ – ಹೇಮಲತಾ ದಂಪತಿಗಳ ಪುತ್ರ ವಚನ್ ಗೌಡ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಕಲ್ಲುಗುಂಡಿಯಿಂದ ತನ್ನ ಮನೆ ಕೊಯನಾಡು ಕಡೆ ಹೋಗುತ್ತಿದ್ದಾಗ ಕೊಯನಾಡು ಅರಣ್ಯ ಇಲಾಖೆ ಬಳಿ ಮಡಿಕೇರಿಯಿಂದ ಬರುತ್ತಿದ್ದ ಲಾರಿ ಮತ್ತು ವಚನ್ ಚಲಾಯಿಸುತ್ತಿದ್ದ ಬೈಕ್ ಪರಸ್ಪರ ಢಿಕ್ಕಿಯಾಯಿತು.
ಅಪಘಾತದಿಂದ ಗಂಭೀರಗಾಯಗೊಂಡ ವಚನ್ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದರ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಅಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ಆದರೆ ಉಸಿರಾಟದ ಸಮಸ್ಯೆ ತೀವ್ರವಾಗಿ ಚುಕಿತ್ಸೆಗೆ ಸ್ಪಂಧಿಸದ ಪರಿಣಾಮ ಬೈಕ್ ಸವಾರ ನಿಧನ ಹೊಂದಿದರು.































Leave a Comment

Your email address will not be published. Required fields are marked *

error: Content is protected !!
Scroll to Top