ಸೆ.13 ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಪಾಜೆ ವಲಯದ ಒಕ್ಕೂಟಗಳ ಪದಗ್ರಹಣ ಸಮಾರಂಭ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಪಾಜೆ ವಲಯದ ನಾಲ್ಕು ಒಕ್ಕೂಟಗಳ ಪದಗ್ರಹಣ ಸಮಾರಂಭ ಸೆಪ್ಟಂಬ‌ರ್ 13ರಂದು ಅರಂತೋಡು ತೆಕ್ಕಿಲ್ ಸಭಾಭವನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸೆಪ್ಟೆಂಬರ್ 4ರಂದು ಅರಂತೋಡು ದುರ್ಗಾ ಮಾತ ಭಜನಾ ಮಂದಿರದಲ್ಲಿ ನಡೆಯಿತು.
ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ಹರೀಶ್ ಆಚಾರ್ಯ, ಭಜನಾ ಪರಿಷತ್ ವಲಯ ಅಧ್ಯಕ್ಷರಾದ ಭಾರತಿ ಉಳುವಾರು, ಭಜನಾ ಮಂಡಳಿ ಕಾರ್ಯದರ್ಶಿ ಸುರೇಶ್ ಉಳುವಾರು, ಪದಾಧಿಕಾರಿಗಳಾದ ಶ್ರೀ ಕುಶಾಲಪ್ಪ ಟೈಲರ್ ಬೆಟ್ಟನ ಹಾಗೂ ಪುಂಡರೀಕ ಕಲ್ಲುಗದ್ದೆ, ವಲಯ ಅಧ್ಯಕ್ಷರಾದ ಹೂವಯ್ಯ ಗೌಡ, ಅರಂತೋಡು ಒಕ್ಕೂಟದ ಅಧ್ಯಕ್ಷೆ ರತ್ನಾವತಿ ಆಳಿಕೆ ಉಪಸ್ಥಿತರಿದ್ದರು.
ನೂತನ ಒಕ್ಕೂಟದ ಅಧ್ಯಕ್ಷರಾದ ನಿಯೋಜಿತ ಅಧ್ಯಕ್ಷ ಅಶೋಕ ಪೀಚೆಮನೆ, ಅರಂಬೂರು ಹಾಗೂ ವೆಂಕಟ್ರಮಣ ಪೆತ್ತಾಜೆ, ತೊಡಿಕಾನ, ಪದಾಧಿಕಾರಿಗಳಾದ ಹೇಮಲತಾ ಅಡ್ಕಬಳೆ, ರಮೇಶ್ ಉಳುವಾರು, ಗಂಗಾಧರ ಪೂಜಾರಿ ಕೊಡೆಂಕಿರಿ,ಸೇವಾ ಪ್ರತಿನಿಧಿಗಳಾದ ಗೀತಾ,ಸುಂದರ ಬಾಜಿನಡ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

































Leave a Comment

Your email address will not be published. Required fields are marked *

error: Content is protected !!
Scroll to Top