ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸ್ವರ್ಣಂ ಜ್ಯುವೆಲ್ಸ್ ಹಾಗೂ ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸಹಯೋಗದಲ್ಲಿ ಪುಟಾಣಿ ಮಕ್ಕಳಿಗಾಗಿ ಸ್ವರ್ಣಂ ಕೃಷ್ಣ ವೇಷ ಸ್ಪರ್ಧೆ ಸೆ.06ರಂದು ಸ್ವರ್ಣಂ ಜ್ಯುವೆಲ್ಲರಿಯ ಆವರಣದಲ್ಲಿ ನಡೆಯಿತು. ಸೂಂತೋಡು ಡೆಂಟಲ್ ಕ್ಲಿನಿಕ್ ನ ವೈದ್ಯೆ ಡಾ. ಶ್ರಮಿಕಾ ಸೂಂತೋಡು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್ ಗೌರವ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸ್ವರ್ಣಂ ಜ್ಯುವೆಲರಿ ಪಾಲುದಾರ ಸಂಜೀವ, ಭವಿತ್ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಡಿಜಿ ಪ್ಲಸ್ ನ ಮಾಲಕರಾದ ಲ. ಚಂದ್ರಶೇಖರ್ ನಂಜೆ ಮತ್ತು ದಿವ್ಯ ನಂಜೆ, ಸೂಂತೋಡು ಎಂಪೋರಿಯಂ ಮಾಲಕಿ ಶ್ರೀಮತಿ ನಳಿನಿ ಸೂರಯ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಬಹುಮಾನ ವಿತರಿಸಿ ಶುಭ ಹಾರೈಸಿದರು. ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಗೌರವ ಉಪಸ್ಥಿತರಿದ್ದು ಮಾತನಾಡಿದರು. ತೀರ್ಪುಗಾರರಾಗಿ ಸಹಕರಿಸಿದ ಅಂಜಲಿ ಮೋಂಟೇಸ್ಸರಿಯ ಶ್ರೀಮತಿ ಗೀತಾಂಜಲಿ ಮತ್ತು ರೋಟರಿ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಅನಿಸಿಕೆ ವ್ಯಕ್ತ ಪಡಿಸಿದರು. ಸ್ವರ್ಣಂ ಜ್ಯುವೆಲರಿಯ ಆಡಳಿತ ಪಾಲುದಾರರಾದ ಪ್ರವೀಣ್ ಗೌಡ, ಲೋಕೇಶ್ ಉಪಸ್ಥಿತರಿದ್ದರು. ಉಪನ್ಯಾಸಕಿ ಕು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. 2 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.
*ಬಹುಮಾನ ವಿಜೇತರು* : 0-2 ವರ್ಷ ಪ್ರಥಮ ಹಿಮಾಂಶು ಎ, ದ್ವಿತೀಯ ಪೂಜ್ಯ ಬೊಳುಗಲ್ಲು, ತೃತೀಯ ಜಿಯಾಂಶಿ ಕಟ್ಟ, ಸಮಾಧಾನಕರ ಬಹುಮಾನ ವೇದಾಂಶಿ ಎಂ.ಡಿ., ಅಹನ ಯು., 2-5 ವರ್ಷ ಪ್ರಥಮ ದೀಪಾಂಶಿ ಎಂ.ವಿ., ದ್ವಿತೀಯ ದಿಶಾನ್ಯ ಶ್ಯಾಮ್ ಪಿ.ಎಸ್., ತೃತೀಯ ಜೈತಿಕ್ ಪಿ., ಸಮಾಧಾನಕರ ಬಹುಮಾನ ಇಶಾನಿ ದೇವಿ ಬಿ ವೈ, ಆರ್ವಿ ಬೋರ್ಕರ್ ಪಡೆದುಕೊಂಡರು. ಸ್ವರ್ಣಂ ಜ್ಯುವೆಲರಿ ಸಿಬ್ಬಂದಿಗಳಾದ ಶೋಧನ್, ಶ್ರೀಮತಿ ಷಡಕ್ಷರಿ ಸಂಜೀವ, ಶ್ರೀಮತಿ ಅಶ್ವಿನಿ ಪ್ರವೀಣ್ ಗೌಡ, ವಿಶ್ವಾಸ್ ಸ್ಟೋರ್ ನ ಪ್ರವೀಣ್, ನವೀನ್, ಕು. ಮೋನಿಷಾ, ಕೆಜೆಯು ಕಾರ್ಯದರ್ಶಿ ಶ್ರೀಜಿತ್ ಸಂಪಾಜೆ, ಸಿಟಿ ಮೊಬೈಲ್, ಚಾಕ್ಲೆಟ್ ಫ್ಯಾನ್ಸಿ, ದಿಯಾ ಫ್ಯಾಷನ್ ನವರು ಸಹಕರಿಸಿದರು.




















