ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಅಂಜಲಿ ಮೊಂಟೆಸ್ಸರಿ ಶಾಲೆಯಲ್ಲಿ ನಂದಗೋಕುಲ – ಮುದ್ದು ಕೃಷ್ಣ ರಾದೆ ಸ್ಪರ್ಧೆ ಹಾಗೂ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುವಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 5ರಂದು ಆಯೋಜಿಸಲಾಯಿತು.
ಘಟಕಾಧ್ಯಕ್ವರಾದ ಜೆಎಪ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು ಶಿಕ್ಷಕರು ಆದ ಶ್ರೀಮತಿ ಗೀತಾಂಜಲಿ ಟಿ. ಜಿ., ಜೇಸಿಐ ಸುಳ್ಯ ಪಯಸ್ವಿಯ ಕಾರ್ಯದರ್ಶಿ ತಾರಾ ಚೂಂತಾರು, ಸಪ್ತಾಹ ನಿರ್ದೇಶಕ ವಿನೋದ್ ಎಂ. ಎನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಮುದ್ದು ಕೃಷ್ಣ, ರಾದೆ ವೇಷಧಾರಣೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುತ್ತಿರುವ ಅಂಜಲಿ ಮೊಂಟೆಸ್ಸರಿ ಶಾಲಾ ಸಂಚಾಲಕರು ಹಾಗೂ ಶಿಕ್ಷಕರಾದ ಗೀತಾಂಜಲಿ ಟಿ. ಜಿ ಅವರನ್ನು ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಪದಾಧಿಕಾರಿಗಳು, ವಿದ್ಯಾರ್ಥಿಗಳ ಹೆತ್ತವರು, ಸಂಸ್ಥೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಘಟಕಾಧ್ಯಕ್ಷರು ಬಹುಮಾನ ನೀಡಿದರು.




















