ವಿಶ್ವ ಹಿಂದೂ ಪರಿಷದ್ ಹಿಂದು ಧರ್ಮಕ್ಕೆ ರಕ್ಷಾ ಕವಚವಾಗಿದೆ : ಔಘಡ್ ಪೀರ್ ರಾಜೇಶ್ ನಾಥ್ ಜೀ

ಸುಳ್ಯ : ವಿಶ್ವ ಹಿಂದೂ ಪರಿಷದ್ ಹಿಂದೂ ಧರ್ಮಕ್ಕೆ ರಕ್ಷಾ ಕವಚವಾಗಿದೆ ಎಂದು ಮರ್ಕಂಜ ಅನ್ನಪೂರ್ಣೇಶ್ವರಿ ಕ್ಷೇತ್ರ ಯೋಗೀಶ್ವರಿ ಮಠದ ಧರ್ಮದರ್ಶಿ ಔಘಡ್ ಪೀರ್ ರಾಜೇಶ್ ನಾಥ್ ಜೀ ಹೇಳಿದರು.
ಸುಳ್ಯ ವಿಶ್ವಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ,ಮೊಸರು ಕುಡಿಕೆ ಉತ್ಸವ ಸಮಿತಿ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೆ.8 ರಂದು 13 ನೇ ವರ್ಷದ ಸುಳ್ಯ ಮೊಸರು ಕುಡಿಕೆ ಉತ್ಸವ, ವೀರ ಯುವಕರ ಅಟ್ಟಿ ಮಡಕೆ


































ಒಡೆಯುವ ಶೋಭಾಯಾತ್ರೆಯ ಅಂಗವಾಗಿ ಶ್ರೀ ಚೆನ್ನಕೇಶವ ದೇವಳದ ವಠಾರದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾನು ಹಿಂದು ಹೇಳಲು ಧೈರ್ಯ ಕೊಟ್ಟಿರುವುದು ವಿಶ್ವ ಹಿಂದೂ ಪರಿಷದ್ ಪ್ರಯಾಗಾ್ ರಾಜ್ ನಲ್ಲಿ ನಡೆದ ಕುಂಬ ಮೇಳ ಯಶಸ್ವಿಯ ಹಿಂದೆ ಹಿಂದು ಪರಿಷತ್ ನ ಪಾತ್ರ ದೊಡ್ಡದು.ರಾಜಕೀಯತೇರವಾಗಿ ಚಿಂತಿಸಿದರೆ ಹಿಂದು ಧರ್ಮ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಅವರು ಹೇಳಿದರು.
ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್‌ ಕೆ.ಜಿ ಯವರು ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ರಾಷ್ಟೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥರಾದ ಡಾ. ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಿ ಶ್ರೀ ಕೃಷ್ಣ ಹಿಂದೆ ಧರ್ಮರಕ್ಷಣೆಯ ಕಾರ್ಯ ಮಾಡಿದರೆ ಇಂದು ವಿಶ್ವ ಹಿಂದೂ ಪರಿಷತ್ ಧರ್ಮ ರಕ್ಷಣೆಯ ಕಾರ್ಯ ಮಾಡುತ್ತಿದೆ.‌ ಇದರಿಂದಾಗಿ ಹಿಂದೂ ಸಮಾಜ ನೆಮ್ಮದಿಯಲ್ಲಿದೆ” “ಮನುಷ್ಯ ಮನುಷ್ಯರನ್ನು ತಲುಪದೇ ದೇವರನ್ನು ತಲುಪಲು ಸಾಧ್ಯವಿಲ್ಲ. ಹಿಂದೂ ಸಮಾಜದ ಪ್ರತಿಯೊಬ್ಬರನ್ನು ಕೂಡ ಸಮಾನವಾಗಿ ಕಾಣಬೇಕು.‌ ಸಮಾನತೆಗೆ ಒಪ್ಪದವರನ್ನು ಹೊರಗಿಡಬೇಕು. ನಮ್ಮ ಮನೆಯ ಮಕ್ಕಳಿಗೆ ಧರ್ಮ ಶಿಕ್ಷಣದ ಅಗತ್ಯತೆಯಿದ್ದು, ಫೋಷಕರು ಈ ಬಗ್ಗೆ ಗಮನಹರಿಸಬೇಕು. ಮನೆಯ ಸಂಸ್ಕಾರ ಸರಿ ಇದ್ದರೆ ಮಾತ್ರ ಮಕ್ಕಳು ಸಮಾಜದಲ್ಲಿ ಸಂಸ್ಕಾರಯುತರಾಗುತ್ತಾರೆ. ಹಿರಿಯರನ್ನು ಆಶ್ರಮಕ್ಕೆ ಕಳುಹಿಸದೇ ಗೌರವದಿಂದ ನೋಡಿಕೊಳ್ಳುವ ಕಾರ್ಯ ಆಗಬೇಕು. ಮಕ್ಕಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ದೇವಸ್ಥಾನಕ್ಕೆ ಕಳುಹಿಸುವುದರ ಜತೆಗೆ ಧರ್ಮ ಶಿಕ್ಷಣ ನೀಡುವ ಮೂಲಕ ನಮ್ಮತನವನ್ನು ಜಾಗೃತಗೊಳಿಸಬೇಕಿದೆ” ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಜರಂಗದಳ ಸಂಯೋಜಕರಾದ ನವೀನ್ ಮೂಡುಶೆಡ್ಡೆ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಿ.ಆರ್ .ಪಲ್ಲತಡ್ಕ, ಗೌರವ ಸಲಹೆಗಾರರಾದ ತೀರ್ಥಕುಮಾ‌ರ್ ಕುಂಚಡ್ಕ, ವಿ.ಹೆಚ್.ಪಿ ಅಧ್ಯಕ್ಷರಾದ ಶ್ರೀಕಾಂತ್ ಗೋಳ್ವಾಲ್ಕರ್, ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ, ಕೋಶಾಧಿಕಾರಿ ನವೀನ್‌ಎಲಿಮಲೆ, ಉಪಾಧ್ಯಕ್ಷ ಪ್ರಶಾಂತ್ ಕಾಯರ್ತೋಡಿ, ಬಜರಂಗದಳ ಸಂಯೋಜಕಿ ಹರಿ ಪ್ರಸಾದ್ ಎಲಿಮಲೆ, ದುರ್ಗಾವಾಹಿನಿಯ ಸಂಯೋಜಕಿ ಶ್ರೀಮತಿ ವಿಶಾಲ ಸೀತಾರಾಮ ಕರ್ಲಪ್ಪಾಡಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೈವ ನರ್ತಕರಾದ ರಾಜೇಶ್ ಪಣಿಕ್ಕ‌ರ್ ಮೇನಾಲ ರವರನ್ನು ಸನ್ಮಾನಿಸಲಾಯಿತು


ಕು.ಮೌಲ್ಯ ದೊಡ್ಡಮನೆ ಪ್ರಾರ್ಥಿಸಿ, ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕ‌ರ್ ಪ್ರಾಸ್ತಾವಿಕ ಮಾತನಾಡಿದರು ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ ಸ್ವಾಗತಿಸಿದರು. ಹರಿಪ್ರಸಾದ್ ಎಲಿಮಲೆ ವಂದಿಸಿದರು. ಉಪನ್ಯಾಸಕಿ ಕು.ಬೇಬಿವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಎಣ್ಣೆ ಕಂಬ ಏರುವ ಸ್ಪರ್ಧೆಗೆ ಹಿರಿಯ ಉದ್ಯಮಿಗಳಾದ ಭಾರತ್ ಆಗೋ ಸರ್ವಿಸಸ್ ನ ಮಾಲಕರಾದ ರಾಮಚಂದ್ರ ಪಿ ಆಗ್ರೋ ತೆಂಗಿನಕಾಯಿ ಒಡೆಯುವ ಮೂಲಕ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧರ ಡಿ.ವಿ ಯವರು ಸ್ಪರ್ಧೆಗೆ ಚಾಲನೆ ನೀಡಿ ಶುಭ ಹಾರೈಸಿದರು.ಅಪರಾಹ್ನ ಅಟ್ಟಿ ಮಡಕೆ ಒಡೆಯುವಶೋಭಾ ಯಾತ್ರೆಗೆ ಚೆನ್ನಕೇಶವ ದೇವಸ್ಥಾನದ ಎದುರಿನಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತಸರರಾದ ಡಾ. ಹರಪ್ರಸಾದ್ ತುದಿಯಡ್ಕರವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಮರ್ಕಂಜದ ಅನ್ನಪೂರ್ಣೇಶ್ವರಿ ಕ್ಷೇತ್ರದ ರಾಜೇಶ್ ನಾಥ್ ಜೀಯವರು ಮಡಕೆ ಒಡೆದು ಯಾತ್ರೆಯನ್ನು ಉದ್ಘಾಟಿಸಿದರು.ಶೋಭಾಯಾತ್ರೆಯು ಚೆನ್ನಕೇಶವ ದೇವಸ್ಥಾನದಿಂದ ಆರಂಭಗೊಂಡು ಎ.ಪಿ.ಎಂ.ಸಿ, ಆಯುರ್ವೇದ ಕಾಲೇಜು ಎದುರು, ಕುರುಂಜಿ ಭಾಗ್, ವೇದಶ್ರೀ ಕಾಂಪ್ಲೆಕ್ಸ್, ಕೆ.ಇ.ಬಿ ಎದುರು, ಅಂಬಟೆಡ್ಕ ವೆಹಿಕಲ್ ಕೆಫೆ ಮುಂಭಾಗ, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜ್ ರಸ್ತೆ, ಕುರುಂಜಿಕಾರ್ ವೀಸಾ ಆರ್ಕೇಡ್, ರೈ ಇಂಡಿಯನ್ ಗ್ಯಾಸ್‌ ಕೇಂದ್ರದ ಬಳಿ, ಶಾಸ್ತ್ರಿ ವೃತ್ತ, ಕಶ್ಯಪ ಕಾಂಪ್ಲೆಕ್ಸ್, ಶ್ರೀ ಹರಿ ಕಾಂಪ್ಲೆಕ್ಸ್, ರಾಜಶ್ರೀ ಕಾಂಪ್ಲೆಕ್ಸ್, ಖಾಸಗಿ ಬಸ್ ನಿಲ್ದಾಣ, ನಾಯರ್ ಕಾಂಪ್ಲೆಕ್ಸ್, ಗಾಂಧಿನಗರ, ಐಡಿಯಲ್ ಅಟೋ ವರ್ಕ್ಸ್ ಮುಂಭಾಗ, ಭಗವತಿ ಹಾರ್ಡ್ ವೇರ್ಸ್ ಮುಂಭಾಗ ವಿಶೇಷ ಆಕರ್ಷಣೆಯ ಅಟ್ಟಿ ಮಡಕೆ ಒಡೆಯುವ ವೀರ ಯುವಕರ ಸಾಹಸಮಯ ಪ್ರದರ್ಶನವು ನಡೆಯಿತು.
ಆಕರ್ಷಕ ಎಣ್ಣೆ ಕಂಬ ಏರುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ರೂ.5 ಸಾವಿರ ನಗದು ಬಹುಮಾನವನ್ನು ಪುತ್ತೂರಿನ ಸಂಟ್ಯಾರ್ ನಿವಾಸಿ ನಿರಂಜನ್ ಪಡಕೊಂಡರು.
ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯಲ್ಲಿ 6 ತಂಡಗಳು ಭಾಗವಹಿಸಿದ್ದವು.
ಶ್ರೀ ಶಾಸ್ತಾವು ಯುವಕ ಮಂಡಲ ರೆಂಜಾಳ ಪ್ರಥಮ, ದ್ವಿತೀಯ-ಹೆಚ್ ಟಿ ಎಂಸಿ ಸುಳ್ಯ, ತೃತೀಯ- ಯುವ ಕೇಸರಿ ಬಳಗ ಮುಳ್ಯ ಅಟ್ಟೂರು ಹಾಗೂ ವೀರ ಸಾವರ್ಕರ್ ಕಲ್ಲುಗುಡ್ಡೆ ಕಡಬ, ಅನ್ನ ಪೂರ್ಣ ಪವ‌ರ್ ಬಾಯ್ಸ್, ಯುವಶಕ್ತಿ ದಾಸರಬೈಲು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡಿತು.
ಪ್ರಥಮ ಬಹುಮಾನ ಪಡೆದ ರೆಂಜಾಳ ತಂಡದವರು ತಮಗೆ ಸಿಕ್ಕಿದ ರೂ.17, 013 ನಗದನ್ನು ಬಡ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣಕ್ಕೆ ನೀಡುವುದಾಗಿ ಘೋಷಿಸಿದರು. ರಾಜೇಶ್ ನಾಥ ಸ್ವಾಮೀಜಿ ಯವರು ರೂ.10 ಸಾವಿರ ಕೊಡುವುದಾಗಿ ತಿಳಿಸಿದರು.
ದ್ವಿತೀಯ ರೂ.12,013/- ಮತ್ತು ಶಾಶ್ವತ ಫಲಕ, ತೃತೀಯ ರೂ
9,013/- ಮತ್ತು ಶಾಶ್ವತ ಫಲಕ ಹಾಗೂ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸಮಾಧಾನಕರ ಬಹುಮಾನವನ್ನು ನೀಡಲಾಯಿತು
ಸ್ವರ್ಣಂ ಜ್ಯುವೆಲ್ಸ್ ರವರ ಬೆಳ್ಳಿ ನಾಣ್ಯ ನಿಧಿ ಶೋಧನೆಯಲ್ಲಿ ಮುಳ್ಯ ಅಟ್ಟೂರು ತಂಡ ಪಡೆದುಕೊಂಡಿತು.

Leave a Comment

Your email address will not be published. Required fields are marked *

error: Content is protected !!
Scroll to Top