ಖ್ಯಾತ ಯುವಕವಿ ಎಂ. ಎ. ಮುಸ್ತಫಾ ಬೆಳ್ಳಾರೆಯವರಿಗೆ” ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026

ಕಾಸರಗೋಡು ನಗರದ ಪಾಂಗೋಡು ಶ್ರೀ ದುರ್ಗಾ ಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ಅಕ್ಟೋಬರ್ 11 ರಿಂದ 20 ರವರೆಗೆ ನಡೆಯಲಿರುವ “ಕಾಸರಗೋಡು
ದಸರಾ ಸಾಂಸ್ಕೃತಿಕೋತ್ಸವ-2026 ರ ಅಂಗವಾಗಿ ಅಕ್ಟೋಬರ್ 18 ರಂದು” ಕಾಸರಗೋಡು ದಸರಾ ಕವಿ ಸಮ್ಮೇಳನ”ದಲ್ಲಿ ಖ್ಯಾತ ಯುವಕವಿ,ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಎಂ.ಎ.ಮುಸ್ತಫಾ ಬೆಳ್ಳಾರೆಯವರಿಗೆ”ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ ನಡೆಯಲಿದೆ.















ಎಂ. ಎ. ಮುಸ್ತಫಾ ಬೆಳ್ಳಾರೆಯವರು ಕಳೆದ 27 ವರುಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿದ್ದು “ಹನಿಜೀವನ” ಚುಟುಕು ಸಂಕಲನ “ಅರಳುವ ಹೂವುಗಳು” ಕವನ ಸಂಕಲನ
“ಶಾಂತಿ ಪ್ರೀತಿ ಬೆಳಕಿಗಾಗಿ” ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.ಹಲವಾರು ಪತ್ರಿಕೆಗಳಲ್ಲಿ ಇವರ ಕಥೆ, ಕವನ, ಲೇಖನ, ಹನಿಗವನಗಳು ಪ್ರಕಟವಾಗಿವೆ.ರಾಜ್ಯಮಟ್ಟಗಳೂ ಸೇರಿದಂಥೆ ಸುಮಾರು 75 ಕ್ಕೂ ಮಿಕ್ಕಿ ಕವಿಗೋಷ್ಠಿಗಳಲ್ಲಿ ಕವನ, ಚುಟುಕುಗಳನ್ನು ವಾಚಿಸಿದ್ದಾರೆ.ಕಳೆದ ವರುಷ ದ.ರಾ ಬೇಂದ್ರೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿಗಳು, ಇನ್ನಿತರ ಪ್ರಶಸ್ತಿಗಳನ್ನು ಪಡೆದಿದ್ದಾರೆ.ರಾಜ್ಯಮಟ್ಟದ ಹಲವಾರು ಆನ್ಲೈನ್ ಕವನ,ಚುಟುಕು,ಹನಿಗವನ ಸ್ಪರ್ಧೆಗಳಲ್ಲೂ ಭಾಗವಹಿಸಿ ಅತ್ಯುತ್ತಮ ಉತ್ತಮ,ಪ್ರಥಮ,ದ್ವಿತೀಯ,ತೃತೀಯ ಸ್ಥಾನಗಳನ್ನು ಪಡೆದ್ದಾರೆ.ಸಿನೆಮಗಳಲ್ಲೂ ಜೂನಿಯರ್ ಆರ್ಟಿಸ್ಟಾಗಿಯೂ ಅಭಿನಯ ಕೊಟ್ಟಿದ್ದಾರೆ.ಪ್ರಸ್ತುತ ಇವರು ಸುಳ್ಯದ ಅಮರ ಸುಳ್ಯ ಸುದ್ದಿ ಕನ್ನಡ ವಾರಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಾಷ್ಟ್ರಮಟ್ಟದ 75 ಮಂದಿ ಕವಿಗಳು ಭಾಗವಹಿಸುವ “ಕಾಸರಗೋಡು ದಸರಾ ಕವಿ ಸಮ್ಮೇಳನ” ದಲ್ಲಿ 21 ಮಂದಿ ಕವಿ ಶ್ರೇಷ್ಠರಿಗೆ ರಾಷ್ಟ್ರೀಯ ಮಟ್ಟದ “ಕಾಸರಗೋಡು ದಸರಾ ಕವಿಶ್ರೇಷ್ಠ” ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ ಎಂದು ಕಾಸರಗೋಡು ದಸರಾ ಸಂಚಾಲಕರಾದ, ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ-ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಪಾಂಗೋಡು ಪ್ರವೀಣ್ ನಾಯಕ್ ಜಂಟಿಯಾಗಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top