ಪಂಜದಲ್ಲಿ ಮಧ್ಯವರ್ಜನ ಶಿಬಿರದ ಪೂರ್ವಭಾವಿ ಸಭೆ; ಆಮಂತ್ರಣ ಪತ್ರಿಕೆ ಬಿಡುಗಡೆ

ಪಂಜ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅ.12ರಂದು ಮಧ್ಯವರ್ಜನ ಶಿಬಿರದ ನಾಲ್ಕನೇ ಪೂರ್ವಭಾವಿ ಸಭೆ ನಡೆಯಿತು.
ಸಭೆಯ ಬಳಿಕ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದವರು ದೇವರಲ್ಲಿ ಪ್ರಾರ್ಥಿಸಿ, ಮಧ್ಯವರ್ಜನ ಶಿಬಿರವು ಯಶಸ್ವಿಯಾಗಿ ನಡೆಯಲಿ ಎಂದು ಬೇಡಿಕೊಂಡರು.
ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಪದ್ಮನಾಭ ರೈ ಅಗೋಳಿಬೈಲು ಗುತ್ತು ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.
ಸಭೆಯಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಕಾನತ್ತೂರು, ಶಿಬಿರದ ಗೌರವಾಧ್ಯಕ್ಷ ಶ್ರೇಯಾನ್ಸ್ ಕುಮಾರ್ ಶೆಟ್ಟಿಮೂಲೆ, ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ, ಜನಜಾಗೃತಿ ವೇದಿಕೆ ಪಂಜ ವಲಯದ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ, ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ಶಿವಪ್ರಸಾದ್ ಮಾದನ ಮನೆ, ಕೋ-ಆಪ್ಟ್ ಸದಸ್ಯ ಚಂದ್ರಶೇಖರ್ ಕಟ್ಟ, ಪ್ರಗತಿಬಂಧು–ಸ್ವಸಹಾಯ ಸಂಘಗಳ ಒಕ್ಕೂಟದ ಪಂಜ ವಲಯದ ಅಧ್ಯಕ್ಷ ಧರ್ಮಪಾಲ ಕನ್ಕಲ್ ಹಾಗೂ ಭಜನಾ ಪರಿಷತ್ ವಲಯದ ಅಧ್ಯಕ್ಷ ಪ್ರಕಾಶ್ ನರಿಯಂಗ ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷರಾದ ನಳಿನಿ, ವಾಸುದೇವ ಆನೆಮನೆ, ನಿರ್ಮಲ ಪಲ್ಲೋಡಿ, ವಿನೋದ್ ಬೊಳ್ಮಲೆ ಸೇರಿದಂತೆ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮಧ್ಯವರ್ಜನ ಶಿಬಿರದ ವಿವಿಧ ಜವಾಬ್ದಾರಿಗಳ ಜನಕಹಂಚಿಕೆ, ಆಮಂತ್ರಣ ಪತ್ರಿಕೆ ವಿತರಣೆ, ಸಂಪನ್ಮೂಲ ಕ್ರೋಢೀಕರಣ, ಶಿಬಿರಾರ್ಥಿಗಳ ಆಯ್ಕೆ ಹಾಗೂ ಗಣ್ಯರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕುರಿತು ಚರ್ಚಿಸಲಾಯಿತು.



















Leave a Comment

Your email address will not be published. Required fields are marked *

error: Content is protected !!
Scroll to Top