ಕಲ್ಲುಗುಂಡಿಯಲ್ಲಿ ಮೂಕಪ್ರಾಣಿಯ ಮೇಲೆ ಕ್ರೌರ್ಯ

ಕಲ್ಲುಗುಂಡಿ : ಮನುಷ್ಯನೊಂದಿಗೆ ನಂಬಿಕೆ, ಪ್ರೀತಿ ಮತ್ತು ಆತ್ಮೀಯತೆಯ ಬಂಧ ಬೆಸೆದುಕೊಳ್ಳುವ ಮೂಕಪ್ರಾಣಿ ನಾಯಿಯೊಂದನ್ನು ಹೊಡೆದು ಕೊಂದಿರುವ ಆರೋಪ ಕಲ್ಲುಗುಂಡಿಯಲ್ಲಿ ಕೇಳಿಬಂದಿದೆ. ಮನೆಯ ಮುದ್ದಿನ ಸಾಕು ನಾಯಿಯನ್ನು ಹತ್ಯೆ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





















ಕಲ್ಲುಗುಂಡಿಯಲ್ಲಿ ವಾಸವಿರುವ ಸಿಂಚು ಎಂಬುವರ ಮನೆಯ ಸಾಕು ನಾಯಿಯನ್ನು ಜೋಸೆಫ್ ಎಂಬವರು ಅ. 26ರಂದು ಹೊಡೆದು ಕೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮನೆಯ ಸದಸ್ಯರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಸಾಕು ನಾಯಿಯ ಸಾವಿನ ಹಿನ್ನೆಲೆಯಲ್ಲಿ ಅದರ ಮಾಲೀಕರು ಪೊಲೀಸರ ಮೊರೆ ಹೋಗಿದ್ದಾರೆ.

ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ

ಆರೋಪಿ ಜೋಸೆಫ್ ಮೂಲತಃ ಕೇರಳದ ಪತ್ತನಂತಿಟ್ಟ ಜಿಲ್ಲೆಯವರಾಗಿದ್ದು, ಕಳೆದ ಹಲವು ವರ್ಷಗಳಿಂದ ಕಲ್ಲುಗುಂಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೂರಿನ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಜೋಸೆಫ್ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೂಕಪ್ರಾಣಿಗಳ ಮೇಲಿನ ಕ್ರೌರ್ಯದ ಆರೋಪ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು, ಪ್ರಕರಣದ ಮುಂದಿನ ತನಿಖೆಯ ಬಳಿಕ ಘಟನೆಯ ಸಂಪೂರ್ಣ ವಿವರಗಳು ತಿಳಿದುಬರಬೇಕಿದೆ.

Leave a Comment

Your email address will not be published. Required fields are marked *

error: Content is protected !!
Scroll to Top