ಅರಂತೋಡು ಸಹಕಾರ ಸಂಘದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಗಣಪತಿ ಹವನ, ಧನಲಕ್ಷ್ಮಿ ಪೂಜೆ

*ಅರಂತೋಡು:** ದೀಪಾವಳಿ ಹಬ್ಬದ ಪ್ರಯುಕ್ತ ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ವತಿಯಿಂದ ನ.9ರಂದು ಸಂಘದ ಪ್ರಧಾನ ಕಚೇರಿ ‘ಸಿರಿಸೌಧ’ದಲ್ಲಿ ಗಣಪತಿ ಹವನ ಹಾಗೂ ಧನಲಕ್ಷ್ಮಿ ಪೂಜೆಯು ಶ್ರದ್ಧಾಭಕ್ತಿ ಹಾಗೂ ಧಾರ್ಮಿಕ ಸಂಭ್ರಮದಿಂದ ನೆರವೇರಿತು.





































































ಬೆಳಗ್ಗೆ 6 ಗಂಟೆಗೆ ಗಣಪತಿ ಹವನ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಬಳಿಕ ಸಂಜೆ 3.30ಕ್ಕೆ ಧನಲಕ್ಷ್ಮಿ ಪೂಜೆ ನೆರವೇರಿತು. ಸಂಘದ ಅಭಿವೃದ್ಧಿ, ಸಮೃದ್ಧಿ ಹಾಗೂ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ಡಾ. ಲಕ್ಷ್ಮೀಶ ಕಲ್ಲುಮುಟ್ಲು, ಸಿಇಒ ವಾಸುದೇವ ನಾಯಕ್, ನಿರ್ದೇಶಕರಾದ ಪ್ರಶಾಂತ್ ಕಾಫಿಲ, ಚಂದ್ರಶೇಖರ ಜೋಡಿಪಣೆ, ಶ್ರೀಲತಾ ದೇರಾಜೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ನಿಕಟಪೂರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಯುವ ನ್ಯಾಯವಾದಿ ದೀಪಕ್ ಕುತ್ತಮೊಟ್ಟೆ, ಶ್ರೀ ಮಂಜುನಾಥೇಶ್ವರ ತಾಲೂಕು ಸಂಘಟನೆಯ ಅಧ್ಯಕ್ಷ ಸೋಮಶೇಖರ ಪೈಕ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ತೀರ್ಥರಾಮ ಆಡ್ಕಬಳೆ, ಡಾ. ಹರ್ಷವರ್ಧನ, ಪೂಜಾ ಸಂತೋಷ್, ಡೀನಾ ಚಂದ್ರಶೇಖರ, ಚಂದ್ರಕಲಾ ಕುತ್ತಮೊಟ್ಟೆ ಸೇರಿದಂತೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top