ಚೊಕ್ಕಾಡಿ ಎಜ್ಯುಕೇಷನ್ ಸೊಸೖಟಿ(ರಿ ) ಕುಕ್ಕುಜಡ್ಕ ಇದರ ಮಹಾಸಭೆ

  ಚೊಕ್ಕಾಡಿ ಎಜ್ಯುಕೇಷನ್  ಸೊಸೈಟಿ (ರಿ.) ಕುಕ್ಕುಜಡ್ಕ ಇದರ 2025-26 ನೇ ಸಾಲಿನ ಮಹಾಸಭೆಯು ಆಡಳಿತ ಮಂಡಳಿಯ ನಿರ್ದೇಶಕರಾದ ಆನಂದ ಗೌಡ ಚಿಲ್ಪಾರುರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಆಡಳಿತ ಮಂಡಳಿಯ ಕಾರ್ಯದರ್ಶಿ ತೇಜಸ್ವಿ ಕಡಪಳ 2025-26 ನೇ ಸಾಲಿನ ವಾರ್ಷಿಕ ವರದಿ ಹಾಗೂ 2025-26 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ನಡೆಸುವ ಚೊಕ್ಕಾಡಿ ಪ್ರೌಢಶಾಲೆ ಹಾಗೂ ಚೊಕ್ಕಾಡಿ ಆಂಗ್ಲ ಮಾಧ್ಯಮ ಶಾಲೆಗಳ ಶೖಕ್ಷಣಿಕ ಪ್ರಗತಿ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಸಭೆಯಲ್ಲಿ ವಿಚಾರ ವಿಮರ್ಶೆ ನಡೆಸಲಾಯಿತು.
ಎಜ್ಯುಕೇಶನ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ನಿರ್ದೇಶಕರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಶಾಲಾ ಮುಖ್ಯ ಶಿಕ್ಷಕ ಸಂಕೀರ್ಣ. ಎ. ಎಲ್ ಸ್ವಾಗತಿಸಿ, ತೇಜಸ್ವಿ ಕಡಪಳ ಧನ್ಯವಾದಗೖದರು.





































































































ಮಹಾಸಭೆಯ ನಂತರ ಶಾಲಾ ನೂತನ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ಸಭೆ ನಡೆಸಲಾಯಿತು
ಚೊಕ್ಕಾಡಿ ಎಜ್ಯುಕೇಶನ್ ಸೊಸೖಟಿಯ ನೂತನ ಅಧ್ಯಕ್ಷರಾಗಿ ನಿರಂಜನ ಕೋಡ್ತುಗುಳಿ, ಕಾರ್ಯದರ್ಶಿಯಾಗಿ ತೇಜಸ್ವಿ ಕಡಪಳ, ಕೋಶಾಧಿಕಾರಿಯಾಗಿ ಜಗನ್ನಾಥ ಹಿರಿಯಡ್ಕ, ಉಪಾಧ್ಯಕ್ಷರಾಗಿ ಅರುಣಕುಮಾರ ನಾಯರ್ಕಲ್ಲು, ಜತೆ ಕಾರ್ಯದರ್ಶಿಯಾಗಿ ತಿಮ್ಮಪ್ಪ ಗೌಡ ಕೊಂಡೆಬಾಯಿ ಹಾಗೂ ಚೊಕ್ಕಾಡಿ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿ ಸುಪ್ರೀತ್ ಮೋಂಟಡ್ಕರವರನ್ನು .ಸರ್ವಾನುಮತದಿಂದ ಆರಿಸಲಾಯಿತು.
ನಿರ್ದೇಶಕರುಗಳಾಗಿ ಆನಂದ ಗೌಡ ಚಿಲ್ಪಾರು, ಮಾಯಿಲಪ್ಪ ಸಂಕೇಶ, ರಜನೀಕಾಂತ ಉಮ್ಮಡ್ಕ, ವಿನೋದ ಪವಿತ್ರಮಜಲು, ಸನತ್ ದೇರಾಜೆ, ಅನಿಲ್ ಪೂಜಾರಿ ಮನೆ,ಮಹೇಶ್ ಮೇರ್ಕಜೆ, ಮುರಲೀಧರ ಕೋಡ್ತುಗುಳಿ ಹಾಗೂ ತಿರುಮಲೇಶ್ವರ ದಂಬೆತೋಟ ಎಕ್ಸ್ ಅಫೀಶಿಯೋ ಮೆಂಬರ್ ಆಗಿ ಶಾಲಾ ಮುಖ್ಯ ಶಿಕ್ಷಕ ಸಂಕೀರ್ಣ. ಎ. ಎಲ್ ಆಯ್ಕೆಯಾದರು
ತೇಜಸ್ವಿ ಕಡಪಳ ಸ್ವಾಗತಿಸಿ ಸಂಕೀರ್ಣ ಎ. ಎಲ್ ಧನ್ಯವಾದಗೖದರು.

Leave a Comment

Your email address will not be published. Required fields are marked *

error: Content is protected !!
Scroll to Top