ಬಿಜೆಪಿ ಸುಳ್ಯ ಮಂಡಲದ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಸುಳ್ಯ ಭಾಜಪ ಕಚೇರಿಯಲ್ಲಿ ಜೂ.17 ರಂದು ನಡೆಯಿತು.
ಈ ಸಭೆಯಲ್ಲಿ ಓಬಿಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಮಹೇಶ್ ಜೋಗಿ ಪ್ರಧಾನ ಕಾರ್ಯದರ್ಶಿಯಾದ ಮೋಹನ ದೇವಸ್ಯ, ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ, ಸುಳ್ಯಮಂಡಲದ ಪ್ರಭಾರಿಯಾದ ವಿನೋದ್ ಮತ್ತು ಅಧ್ಯಕ್ಷರಾದ ವೆಂಕಟ್ ವಳಂಬೆ, ಪ್ರಧಾನ ಕಾರ್ಯದರ್ಶಿಯಾದ ಶಶಿಧರ ಕಲ್ಮಂಜ ಮಂಡಲ ಪ್ರಧಾನ ಕಾರ್ಯದರ್ಶಿಯಾದ ವಿನಯಕುಮಾರ್ ಕಂದಡ್ಕ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ಸುಳ್ಯ ಮಂಡಲದ ಓಬಿಸಿ ಮೋರ್ಚಾದ ಪ್ರಭಾರಿಯಾದ ಭಾರತಿ ಪುರುಷೋತ್ತಮ, ಸುಳ್ಯ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಗಿರೀಶ ಫೈಲಾಜೆ ,ಉಪಾಧ್ಯಕ್ಷರಾದ ಚಂದ್ರಶೇಖರ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾ ಅಶೋಕ ಸುಳ್ಯ, ಸದನಂದಾಚಾರ್ಯ ಕಡಬ ಮತ್ತು ಜಿಲ್ಲಾ ಓಬಿಸಿ ಮೋರ್ಚದ ಕಾರ್ಯದರ್ಶಿ ಚಂದ್ರಶೇಖರ ಪನ್ನೆ, ಭಾಗವಹಿಸಿದರು.
ಓಬಿಸಿ ಮಹಿಳಾ ವಸತಿನಿಯಕ್ಕೆ ಭೇಟಿ ನೀಡಿ ಮತ್ತು ಒಬಿಸಿ ಮೋರ್ಚಾದ ಕೋಶಾಧಿಕಾರಿ ಪೂರ್ಣಿಮರವರ ಮನೆಗೆ ಭೇಟಿ ನೀಡಿ ಅವರ ತೋಟದಲ್ಲಿ ಹಣ್ಣಿನ ಗಿಡ ನೆಡಲಾಯಿತು.
ಬಿಜೆಪಿ ಸುಳ್ಯ ಮಂಡಲ ಓಬಿಸಿ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ





























































