ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕಡೆಪಾಲ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ಚಾಲಕನಿಗೆ ಗಾಯವಾದ ಘಟನೆ ಜು.21 ರಂದು ಸಂಭವಿಸಿದೆ.
ಕಲ್ಲುಗುಂಡಿಯಿಂದ ಕಡೆಪಾಲದ ಕಡೆಗೆ ಹೋಗುತ್ತಿದ್ದ ಕಾರು ಕಡೆಪಾಲದ ತಿರುವು ಬಳಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಚರಂಡಿಗೆ ಪಲ್ಟಿಯಾಗಿದೆ. ಪರಿಣಾಮವಾಗಿ ಕಾರಿನ ಚಾಲಕ ಗುರುವ ಎಂಬವರಿಗೆ ತಲೆಗೆ ಗಾಯವಾಗಿದೆ. ಕೂಡಲೇ ಸ್ಥಳೀಯರ ಸಹಕಾರದಿಂದ ಕಲ್ಲುಗುಂಡಿಯ ತಾಜುದ್ದೀನ್ ಟರ್ಲಿ ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯದ್ದು ಚಿಕಿತ್ಸೆ ಕೊಡಿಸಲಾಗಿದೆ.





































































