ತೆಂಗಿನಕಾಯಿ ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಗಂಡಸರು ಮಹಿಳೆಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಕಡೂರು ತಾಲೂಕಿನ ಯಗಟಿ ಸಮೀಪದ ಪಾತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಾತೇನಹಳ್ಳಿ ಗ್ರಾಮದ ಶಿವಮ್ಮ (32) ಎಂಬುವರು ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡ ಮಹಿಳೆಯಾಗಿದ್ದಾರೆ.ಅವರನ್ನು ತಕ್ಷಣವೇ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮ್ಮ ಅವರು ಗ್ರಾಮದ ಪಾಳುಬಿದ್ದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದರು. ಬಳಿಕ ತೋಟದ ಮಾರ್ಗವಾಗಿ ಬೇರೆ ಜಾಗಕ್ಕೆ ತೆರಳುತ್ತಿದ್ದಾಗ, ಕೈಯಲ್ಲಿದ್ದ ತೆಂಗಿನಕಾಯಿಯನ್ನು ಕಂಡ ತೋಟದ ಮಾಲೀಕ ನವೀನ್ ಎಂಬಾತ “ಇದು ನಮ್ಮದೇ ತೋಟದ ತೆಂಗಿನಕಾಯಿ” ಎಂದು ಆರೋಪಿಸಿದ್ದಾನೆ. ಅಲ್ಲದೆ “ನಾನು ಕರೆದಾಗ ಬರುವುದಿಲ್ಲ, ತೆಂಗಿನಕಾಯಿ ಕೊಂಡೊಯ್ಯುತ್ತೀಯಾ?” ಎಂದು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ತೆಂಗಿನ ಕಾಯಿ ಕಳ್ಳಿ ಎಂದು ಆರೋಪಿಸಿ,ಮಹಿಳೆಯ ಮೇಲೆ ಭೀಕರ ಹಲ್ಲೆ





































































