ಕುಡಿತದ ಮತ್ತಿನಲ್ಲಿ ರಸ್ತೆ ಬದಿ ಅಪಘಾತ ತಪ್ಪಿಸಲು ಇರಿಸಿದ್ದ ಕನ್ನಡಿ ಕಳವು ಮಾಡಿ ಸಿ.ಸಿ ಕೆಮಾರದ ಮೂಲಕ‌ ಸಿಕ್ಕಿ ಬಿದ್ದ ಯುವಕರು

ಸಂಪಾಜೆ ಗ್ರಾಮದ ಚಡಾವಿನಲ್ಲಿ ಹೆದ್ದಾರಿ ಬಳಿ ಅಪಘಾತ ತಪ್ಪಿಸಲು ಇಟ್ಟಿರುವ ಕನ್ನಡಿ ಯನ್ನು ತಡರಾತ್ರಿ ಇಬ್ಬರು ಯುವಕರು ಕಾರಲ್ಲಿ ಬಂದು ಕಳವು ಮಾಡಿ ತಿಳಿದ ಪೊಲೀಸರು ಸಿಸಿ ಟಿವಿ ದೃಶ್ಯ ಆಧರಿಸಿ ಕಳ್ಳರನ್ನು ಪತ್ತೆ ಹಚ್ಚಿದ ಘಟನೆ ವರದಿಯಾಗಿದೆ.
ಕಳ್ಳತನ ಮಾಡಿದವರು ಪುತ್ತೂರು ಮೂಲದ ಶ್ರೇಯಸ್ ಕುಮಾ‌ರ್ ಮತ್ತು ಪ್ರೀತಮ್ ರೈ.ಕುಡಿದ ಅಮಲಿನಲ್ಲಿ ಈ ಕೃತ್ಯ ಮಾಡಿದ್ದಾರೆ ಎಂದು ಪೊಲೀಸ್‌ ತನಿಖೆಯ ವೇಳೆ ಅವರು ಬಾಯಿ ಬಿಟ್ಟಿದ್ದಾರೆ.
ಇವರಿಬ್ಬರು ಪುತ್ತೂರಿನಿಂದ ಮಡಿಕೇರಿ ಕಡೆಗೆ ಸುತ್ತಾಡಲು ಕಾರಿನಲ್ಲಿ ಹೋಗುತ್ತಿದ್ದಾಗ ರಾತ್ರಿ ಸಮಯ ರಸ್ತೆ ಬದಿ ಇದ್ದ ಈ ಕನ್ನಡಿಯನ್ನು ಬಿಚ್ಚಿ ಅವರು ಬಂದಿದ್ದ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ತೆರೆಳಿದ್ದರು.ಮರು ದಿವಸ ಸ್ಥಳೀಯರು ರಸ್ತೆ ಬದಿ ಇದ್ದ ಕನ್ನಡಿ ಕಾಣದೇ ಇರುವ ಕಾರಣ ಪಕ್ಕದ ಮನೆಯ ಸಿ ಸಿ ಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ಇಬ್ಬರು ಯುವಕರು ಕಳ್ಳತನ ಮಾಡಿರುವುದು ಕಂಡು ಬಂತು
ಪೊಲೀಸರು ಸಿಸಿ ಟಿವಿಯ ದೃಶ್ಯ ವನ್ನು ಆಧರಿಸಿ ತನಿಖೆ ಕೈಗೊಂಡು ಘಟನೆಗೆ ಬಳಸಿದ ಕಾರಿನ ನಂಬರ್ ಬೋರ್ಡ್ ಸಹಾಯದಿಂದ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಅವರ ದೂರವಾಣಿ ನಂಬರ್ ಪಡೆದು ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಮದ್ಯದ ಅಮಲಿನಲ್ಲಿ ಈ ಕೃತ್ಯವನ್ನು ಮಾಡಿರುವುದಾಗಿ ತಪ್ಪಾಗಿರುವುದಾಗಿ ಒಪ್ಪಿಕೊಂಡರು.
ಬಳಿಕ ಪೊಲೀಸರು ಕಳ್ಳತನ ಮಾಡಿದವರಿಂದಲೇ ಕನ್ನಡಿಯನ್ನು ಮರು ಜೋಡಿಸುವ ಕೆಲಸ ಮಾಡಿಸಿ ಜನನ ಲಾಠಿ ರುಚಿ ತೋರಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.



































































































































Leave a Comment

Your email address will not be published. Required fields are marked *

error: Content is protected !!
Scroll to Top