ಮಿಸ್ ಪೈರ್ ಮಗು ಗಂಭೀರ

ಕೂಲಿ‌ ವಿಚಾರವಾಗಿ ಕಾರ್ಮಿಕರನ್ನು ಹೆದರಿಸಲು ಜಮೀನಿನ ಮಾಲೀಕ ಹಾರಿಸಿದ ಗುಂಡು ,ಮಗುವಿನ ತಲೆಗೆ ತಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಗದೀಶ್ ಗೌಡ ಗುಂಡು ಹಾರಿಸಿದ ತೋಟದ ಮಾಲೀಕನಾಗಿದ್ದು ಗೌಡನ ಮನೆಗೆ ಅಸ್ಸಾಂ ಕಾರ್ಮಿಕರು ಕೆಲಸಕ್ಕೆ ಬಂದಿದ್ದರು. ಕಾರ್ಮಿಕರು 400 ರೂ. ಕೂಲಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು‌. ಆದರೆ ಜಗದೀಶ್ ಗೌಡ ಈಗ 350 ರೂ. ಕೊಡ್ತೀನಿ, ಉಳಿದದ್ದು 50 ರೂ. ಆಮೇಲೆ ಕೊಡ್ತೀನಿ ಎಂದು ತಿಳಿಸಿದ್ದ. ಇದೇ ವಿಚಾರಕ್ಕೆ ಕಾರ್ಮಿಕರು ಹಾಗೂ ಮಾಲೀಕನ ನಡುವೆ ಮಾತಿಗೆ ಮಾತು ಬೆಳೆಯಿತು.ಈಗಲೇ 400 ರೂ. ಕೊಡಿ, ಇಲ್ಲ ಕೆಲಸ ಮಾಡಲ್ಲ ಎಂದು ಕಾರ್ಮಿಕರು ಹೊರಟರು ಈ ವೇಳೆ ಮಾತಿನ ಚಕಮಕಿ
ತಳ್ಳಾಟ ನಡೆದಿದೆ ಎನ್ನಲಾಗಿದೆ.
ಕೋವಿ ಹಿಡಿದು ಕಾರ್ಮಿಕರನ್ನು ಹೆದರಿಸಲು ಹೋದಾಗ ತೋಟದ ಮಾಲೀಕ ಜಗದೀಶ್ ಗೌಡನಿಂದ ಮಿಸ್ ಫೈರ್ ಆಗಿ ಪಕ್ಕದಲ್ಲಿದ್ದ ಮಗುವಿನ ತಲೆಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ.
ಮಗುವನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.



































































































































Leave a Comment

Your email address will not be published. Required fields are marked *

error: Content is protected !!
Scroll to Top