ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ ಸುಮಾರು 14 ಜಮಾಅತ್ ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಮ್ಮಿಯುತುಲ್ ಉಲಮಾ ಇದರ ಅಧ್ಯಕ್ಷರಾದ ಬಹು| ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೊಯ ತಂಗಳ್ ರವರನ್ನು ನೇಮಕ ಮಾಡಲಾಗಿದ್ದು ಅವರ ಖಾಝಿ ಸ್ವೀಕಾರ ಸಮಾರಂಭವು ಆಗಸ್ಟ್ 4 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ನ ಕಾರ್ಯದರ್ಶಿ ಅಶ್ರಫ್ ಗುಂಡಿ ತಿಳಿಸಿದ್ದಾರೆ.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿಯಲ್ಲಿ ಮಾಹಿತಿ ನೀಡಿದರು.
ಉದ್ಘಾಟನೆಯನ್ನು ಬಹುl ಎನ್.ಪಿ.ಎಂ ಝನುಲ್ ಆಬಿಧೀನ್ ತಂಘಳ್ ದುಗ್ಗಲಡ್ಕ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ನ ಅಧ್ಯಕ್ಷರಾದ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ವಹಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಖ್ಯಾತ ವಾಗಿ ಅಬ್ದುಲ್ ಸಲಾಂ ಬಾಖವಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಪೂಕೋಯ ತಂಘಳ್ ಪುತ್ತೂರು, ಶೈಖುನಾ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್, ಕೆ.ಎ. ಉಮ್ಮರ್ ಮುಸ್ಲಿಯಾರ್, ಉಮ್ಮರ್ ಪೈಝಿ ಮುಕಂ, ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲ ಫೈಝಿ. ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಉಸ್ಮಾನ್ ಫೈಝಿ ತೊಡಾರ್, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಹಾಗೂ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. జమూఅతారు గా మునీ బివానిగారు ತಾಲೂಕಿನ 14 ಜಮಾಅತ್ ಗಳ ಅಧ್ಯಕ್ಷರುಗಳು ಉಪಸ್ಥಿತರಿರುವ ಈ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ,ಉಪಾಧ್ಯಕ್ಷ,ನಾಜಿ ಇಬ್ರಾಹಿಂ ಕತ್ತಾರ್,ಸಂಘಟನಾ ಕಾರ್ಯದರ್ಶಿ ಜಮಾಲ್ ಬೆಳ್ಳಾರೆ,
ಕೋಶಧಿಕಾರಿ ಹಮೀದ್ ಹಾಜಿ ಸುಳ್ಯ,ಗೌರವ ಸಲಹೆಗಾರರಾದ ತಾಜ್ ಮಹಮ್ಮದ್ ಸಂಪಾಜೆ,ಎಸ್.ಕೆ.ಎಸ್.ಎಸ್.ಎಫ್ ವಲಯ ಅಧ್ಯಕ್ಷ ಅಬೂ ಬೇಕರ್ ಪೂಪಿ ಕತ್ತರ್,ಅಬೂಬಕರ್ ಪಾರೆಕಲ್ಲು,ಸುಳ್ಯ ತಾಲೂಕು ಮದರಸ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಯು.ಪಿ ಬಶೀರ್ ಬೆಳ್ಳಾರೆ,ಅಮೀರ್ ಕುಕ್ಕುಂಬಳ ಉಪಸ್ಥಿತರಿದ್ದರು.
ಆಗಸ್ಟ್ 4 : ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ (ರಿ)ನ ಉಲಮಾ ಜಿಫ್ರಿ ಮುತ್ತುಕೊಯ ತಂಗಳ್ ಅವರ ಖಾಝಿ ಸ್ವೀಕಾರ ಸಮಾರಂಭ





































































